Advertisement

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

02:32 PM Nov 26, 2024 | Team Udayavani |

ಮುಂಬೈ: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ಅವರು ಸೋಮವಾರ (ನ.25) ತಡರಾತ್ರಿ ನಿಧನಹೊಂದಿದ್ದಾರೆ ಅವರಿಗೆ 81 ವರ್ಷ ವಯಸ್ಸಾಗಿತ್ತು.

Advertisement

ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಚಿಕಿತ್ಸೆಗೆ ಒಳಗಾಗಿ ತಿಂಗಳ ಹಿಂದೆಯಷ್ಟೇ ಮುಂಬೈಗೆ ಬಂದಿದ್ದರು ಎನ್ನಲಾಗಿದ್ದು ಸೋಮವಾರ ತಡರಾತ್ರಿ ನಿಧನಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೆ ಮುಂಬೈ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು ಹಾಗೆಯೆ ಸಂಜೆ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗಿದೆ.

ಎಸ್ಸಾರ್ ಸಮೂಹವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ರುಯಿಯಾ ಅವರು ಪ್ರಮುಖ ಕೊಡುಗೆ ನೀಡಿದ್ದಾರೆ. ಶಶಿ ರುಯಿಯಾ ಅವರ ನೇತೃತ್ವದಲ್ಲಿ, ಕಂಪನಿಯ ವ್ಯವಹಾರವು ಪ್ರಪಂಚದ 25 ದೇಶಗಳಿಗೆ ಹರಡಿತು. ಇವರ ಅಗಲಿಕೆಯಿಂದ ಭಾರತದ ಉದ್ಯಮಕ್ಕೆ ದೊಡ್ಡ ನಷ್ಟವುಂಟಾಗಿದೆ.

1969 ರಲ್ಲಿ ಉದ್ದಿಮೆ ಆರಂಭ:
ಶಶಿ ರುಯಿಯಾ ಅವರು ತಮ್ಮ ತಂದೆ ಕಿಶೋರ್ ರುಯಿಯಾ ಅವರ ಮಾರ್ಗದರ್ಶನದಲ್ಲಿ ತಮ್ಮ ಸಹೋದರ ರವಿ ರುಯಿಯಾ ಅವರೊಂದಿಗೆ 1969 ರಲ್ಲಿ ಚೆನ್ನೈನಲ್ಲಿ ಎಸ್ಸಾರ್ ಗ್ರೂಪ್ ಅನ್ನು ಸ್ಥಾಪಿಸಿದರು. ಸಣ್ಣ ನಿರ್ಮಾಣ ಸಂಸ್ಥೆಯಾಗಿ ಪ್ರಾರಂಭವಾದ ಸಂಸ್ಥೆಯು ಅವರ ನಾಯಕತ್ವದಲ್ಲಿ ಅಗಾಧವಾಗಿ ವಿಸ್ತರಿಸಿತು ಮತ್ತು ಈಗ ಸಾರಿಗೆ, ಮೂಲಸೌಕರ್ಯ, ಗಣಿಗಾರಿಕೆ, ತೈಲ ಸಂಸ್ಕರಣೆ, ಉಕ್ಕು ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದೆ. 90 ರ ದಶಕದಲ್ಲಿ, ಎಸ್ಸಾರ್ ಗ್ರೂಪ್ ಉಕ್ಕು ಉತ್ಪಾದನೆ ಮತ್ತು ಟೆಲಿಕಾಂ ಕ್ಷೇತ್ರಗಳಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ಸ್ಥಾಪಿಸಿತ್ತು. 2000 ರ ಸುಮಾರಿಗೆ ಶಶಿ ರುಯಿಯಾ ಅವರ ನೇತೃತ್ವದಲ್ಲಿ ಎಸ್ಸಾರ್ ಗ್ರೂಪ್ ಗಣಿಗಾರಿಕೆ, ವಿದ್ಯುತ್ ವಲಯ ಮತ್ತು ಹಡಗು ಸಾರಿಗೆ ಸೇರಿದಂತೆ ಹಲವು ಹೊಸ ಉದ್ಯಮಗಳನ್ನು ಆರಂಭಿಸಿತು.

Advertisement

ಶಶಿ ರುಯಿಯಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next