Advertisement

SpaceX ರಾಕೆಟ್‌ ಮೂಲಕ ಇಸ್ರೋ ಉಪಗ್ರಹ ಉಡಾವಣೆ

12:03 AM Jan 04, 2024 | Team Udayavani |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಎಲ್ಲನ್‌ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್‌ ಸಂಸ್ಥೆಯೊಂದಿಗೆ ಸೇರಿಕೊಂಡು ಬೃಹತ್‌ ಸಂಪರ್ಕ ಉಪಗ್ರಹ ಉಡಾ­ವಣೆಗೆ ಸಜ್ಜಾಗಿದೆ. 4,700 ಕೆಜಿ ತೂಕದ ಜಿಸ್ಯಾಟ್‌-20 ಅನ್ನು ಕಕ್ಷೆಗೆ ಸೇರಿಸಲು ಸ್ಪೇಸ್‌ಎಕ್ಸ್‌ನ ಫಾಲ್ಕನ್‌-9 ಬಾಹ್ಯಾಕಾ ನೌಕೆಯನ್ನು ಇಸ್ರೋ ಬಳಸಿಕೊಳ್ಳಲಿದೆ.

Advertisement

4 ಟನ್‌ಗಿಂತ ಜಾಸ್ತಿ ತೂಕವಿರುವ ಉಪಗ್ರಹಗಳನ್ನು ಉಡಾವಣೆ ಮಾಡುವ ಶಕ್ತಿ ಭಾರತೀಯ ರಾಕೆಟ್‌ಗಳಿ­ಗಿಲ್ಲ. ಹಾಗಾಗಿ ಇದುವರೆಗೆ ಫ್ರಾನ್ಸ್‌ನ ಏರಿ­ಯನ್‌ಸ್ಪೇಸ್‌ ಸಂಸ್ಥೆಯ ರಾಕೆಟ್‌ಗಳನ್ನು ಬಳಸಿ ಉಪಗ್ರಹಗಳ ನ್ನು ಉಡಾವಣೆ ಮಾಡುತ್ತಿತ್ತು. ಈ ವರ್ಷ ದ್ವಿತೀಯ ತ್ತೈಮಾಸಿಕದಲ್ಲಿ ಜಿಸ್ಯಾಟ್‌-20ಯನ್ನು ಅಮೆರಿಕದ ಫ್ಲೋರಿಡಾದಿಂದ ಕಕ್ಷೆಗೆ ಸೇರಿಸಲು ಯೋಜಿಸಲಾಗಿದೆ. ಈ ನಿಟ್ಟಿ ನ ಲ್ಲಿ ಸ್ಪೇಸ್‌ಎಕ್ಸ್‌ ಸಂಸ್ಥೆಯೊಂದಿಗೆ ಭಾರತ ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಒಪ್ಪಂದ ಮಾಡಿಕೊಂಡಿವೆ.

ಜಿಸ್ಯಾಟ್‌-20 ಏನು ಮಾಡುತ್ತೆ?: ಎನ್‌ಎಸ್‌ಐಎಲ್‌ ಸಂಸ್ಥೆ ಇಸ್ರೋ­ ಜತೆ ಸೇರಿಕೊಂಡು ಜಿಸ್ಯಾಟ್‌-20 ಉಪಗ್ರಹ ಸಿದ್ಧಪಡಿಸಿದೆ. ಇದ ರಲ್ಲಿರುವ 32 ಪ್ರಬಲ ಬೀಮ್‌ಗಳ ಮೂಲಕ ಅಂಡ ಮಾನ್‌-ನಿಕೋಬಾರ್‌, ಲಕ್ಷದ್ವೀಪ, ಜಮ್ಮುಕಾಶ್ಮೀರ ಸೇರಿ ಇಡೀ ಭಾರತ ವನ್ನೇ ಸಂಪರ್ಕ ವ್ಯವಸ್ಥೆಯಡಿ ತರಬ ಹುದು. 48 ಜಿಬಿಪಿಎಸ್‌ ವೇಗದಲ್ಲಿ (ಎಚ್‌ಟಿಎಸ್‌) ಮಾಹಿತಿ, ಸಂಕೇತ, ಚಿತ್ರಗಳನ್ನು ವರ್ಗಾಯಿಸುತ್ತದೆ. ಸಂಪರ್ಕವೇ ಇಲ್ಲದಿರುವ ಸ್ಥಳಗಳಿಗೂ ಅಂತ ರ್ಜಾಲ ಸಂಪರ್ಕ ಕಲ್ಪಿಸುವುದು ಉಪಗ್ರಹದ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next