Advertisement

ISRO ಆದಿತ್ಯನ ಮೊದಲ ಚಿತ್ರ ಬಿಡುಗಡೆ

12:33 AM Aug 15, 2023 | Shreeram Nayak |

ಹೊಸದಿಲ್ಲಿ: ಚಂದ್ರನ ಅಧ್ಯಯನಕ್ಕೆ ಚಂದ್ರಯಾನ-3 ನೌಕೆಯನ್ನು ಕಳುಹಿಸಿರುವ ಇಸ್ರೋ, ಈಗ ಆದಿತ್ಯಯಾನಕ್ಕೆ ಸಿದ್ಧವಾಗಿದೆ. ಆದಿತ್ಯನ ಅಧ್ಯಯನಕ್ಕೆ ಕಳುಹಿಸಲಿರುವ ನೌಕೆಯ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದೆ. ಆದಿತ್ಯ-ಎಲ್‌1 ಎಂದು ಈ ಉಪಗ್ರಹಕ್ಕೆ ಹೆಸರಿಡಲಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಆದಿತ್ಯ-ಎಲ್‌1 ಸೂರ್ಯನ ಅಧ್ಯಯನಕ್ಕೆ ಸಿದ್ಧ ಪಡಿಸಿರುವ ನೌಕೆ. ಸೂರ್ಯನ ಜ್ವಾಲೆಗಳು, ಸೌರಮಾರುತಗಳನ್ನು ಇದು ಪರಿಶೀಲಿಸಲಿದೆ. ಈ ಬಗ್ಗೆ ಮುಂಚಿತವಾಗಿಯೇ ಗಮನಕ್ಕೆ ತಂದು, ಭೂಮಿಗೆ ಸೌರಮಾರುತದಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಸೂರ್ಯನ ವಿದ್ಯುತ್ಕಾಂತೀಯ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿ, ಉಪಗ್ರಹಗಳು, ವಿದ್ಯುತ್‌ ಆಧಾರಿತ ಸಂವಹನ ವ್ಯವಸ್ಥೆಗಳನ್ನು ಅಪಾಯದಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.

ಸೂರ್ಯ ಸೌರವ್ಯೂಹದ ಅತೀದೊಡ್ಡ ಕಾಯ. ಹೈಡ್ರೋಜನ್‌ ಮತ್ತು ಹೀಲಿಯಂ ಕಾರಣಕ್ಕೆ ತೀವ್ರ ಬಿಸಿಯುಗುಳುವ ಸೂರ್ಯನ ಒಳಭಾಗ ವಿಪರೀತ ಶಾಖದಿಂದ ಕೂಡಿರುತ್ತದೆ. ಕೋರ್‌ ಭಾಗದಲ್ಲಿ (ಒಳಭಾಗ) 15 ಮಿಲಿಯನ್‌ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುತ್ತದೆ. ಇದಕ್ಕೆ ಹೋಲಿಸಿದರೆ ಸೂರ್ಯನ ಮೇಲ್ಮೆ„ಯಲ್ಲಿ ಬಿಸಿ ಕಡಿಮೆ, ಅಲ್ಲಿ 5,500 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುತ್ತದೆ. ಸೂರ್ಯನ ಮಧ್ಯ ಭಾಗದಲ್ಲಿ ನಡೆಯುವ ನ್ಯೂಕ್ಲಿಯರ್‌ ಫ್ಯೂಷನ್‌ ಪ್ರಕ್ರಿಯೆಯಿಂದ ಬಿಸಿ ಉತ್ಪತ್ತಿಯಾಗುತ್ತದೆ ಅದೇ ಆತನಿಗೆ ಶಕ್ತಿ ತುಂಬುತ್ತದೆ. 450 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಸೂರ್ಯ, ಭೂಮಿಯಿಂದ 150 ಮಿಲಿಯನ್‌ ಕಿ.ಮೀ. ದೂರದಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next