Advertisement

INSAT-3DS ಯಶಸ್ವಿ ಉಡಾವಣೆ ; ಇಸ್ರೋ ಮತ್ತೊಂದು ಸಾಧನೆ

06:42 PM Feb 17, 2024 | Team Udayavani |

ಶ್ರೀಹರಿಕೋಟಾ(ಆಂಧ್ರಪ್ರದೇಶ): ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ F14 (GSLV-F14) ನಲ್ಲಿ ಇಸ್ರೋದ INSAT-3DS ಹವಾಮಾನ ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿ “GSLV-F14 INSAT-3DS ಮಿಷನ್ ಯಶಸ್ವಿ ಉಡಾವಣೆ ಸಾಧನೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಉತ್ತಮ ಕಕ್ಷೆಗೆ ತಲುಪಿಸಲಾಗಿದೆ. ವಾಹನವು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ನಾವು ಗಮನಿಸಿದ್ದೇವೆ ಎಂದು ತಂಡದ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

INSAT-3DS ಯಶಸ್ವಿ ಉಡಾವಣೆ ನಂತರ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ಇತರ ಇಸ್ರೋ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಅಧಿಕಾರಿಗಳು ಇಸ್ರೋದ “ನಾಟಿ ಬಾಯ್” ಎಂದು ತಮಾಷೆಯಾಗಿ ಉಲ್ಲೇಖಿಸಿರುವ ಜಿಎಸ್‌ಎಲ್‌ವಿ ರಾಕೆಟ್ (ರಾಕೆಟ್ ಈ ಹಿಂದೆ ಕೆಲವು ವೈಫಲ್ಯಗಳನ್ನು ಕಂಡಿತ್ತು) ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದ ಅಧಿಕಾರಿಯೊಬ್ಬರು ಇದು ಪರಿಪೂರ್ಣ ಉಡಾವಣ ಅಭಿಯಾನ ಎಂದು ಕರೆದಿದ್ದಾರೆ.

ಕೆಲಸವೇನು?
ಭಾರತದ ಭೂ ವಿಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆದಿರುವ INSAT-3DS ಉಪಗ್ರಹವನ್ನು “ಹವಾಮಾನ ಮುನ್ಸೂಚನೆ, ವಿಪತ್ತು ಎಚ್ಚರಿಕೆಗಾಗಿ ವರ್ಧಿತ ಹವಾಮಾನ ವೀಕ್ಷಣೆ, ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆಗಾಗಿ ವಿನ್ಯಾಸಗೊಳಿಸಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next