Advertisement

ISRO: ಸಂಕಷ್ಟದಲ್ಲಿ ಸಿಲುಕುವ ಮೀನುಗಾರರಿಗೆ ಇಸ್ರೋ “ಡಿಎಟಿ” ಸಹಾಯಹಸ್ತ

10:46 PM Jan 17, 2024 | Team Udayavani |

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ “ಡಿಸ್ಟ್ರೆಸ್‌ ಅಲರ್ಟ್‌ ಟ್ರಾನ್ಸ್‌ಮೀಟರ್‌'(ಡಿಎಟಿ) ಎಂಬ ಸಾಧನವನ್ನು ಅತ್ಯಾಧುನಿಕಗೊಳಿಸಿ, ಬಿಡುಗಡೆ ಮಾಡಿದೆ. ಕಡಲಲ್ಲಿ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವವರಿಗೆ ಸಹಾಯ ಮಾಡುವ ಈ ಸಾಧನ 2010ರಲ್ಲೇ ಬಿಡುಗಡೆಯಾಗಿತ್ತು. ಈಗ ಅದರ 2ನೇ ಆವೃತ್ತಿಯನ್ನು ಅಂದರೆ ಡಿಎಟಿ-ಸೆಕೆಂಡ್‌ ಜನರೇಶನ್‌ ಅನ್ನು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಬಿಡುಗಡೆ ಮಾಡಿದ್ದಾರೆ.

Advertisement

ಲಾಭಗಳೇನು?:

  1. ಕಡಲಲ್ಲಿರುವ ಮೀನುಗಾರರು ತೊಂದರೆಯಲ್ಲಿದ್ದರೆ ಡಿಎಟಿ ಬಳಸಿ ಅಲರ್ಟ್‌ ಬಟನ್‌ ಒತ್ತಬಹುದು. ಇದು ನಿಗದಿತ ಸಂವಹನ ಉಪಗ್ರಹದ ಮೂಲಕ ಐಎನ್‌ಎಂಸಿಸಿಯ ನಿಯಂತ್ರಣ ಕೊಠಡಿಗೆ ಹೋಗುತ್ತದೆ.
  2. ಈ ಸಂದೇಶ ಬಳಸಿ ನಿರ್ದಿಷ್ಟ ದೋಣಿ ಎಲ್ಲಿದೆ ಎಂದು ಗುರ್ತಿಸಿ ಭಾರತೀಯ ಕರಾವಳಿ ಪಡೆ (ಐಸಿಜಿ) ನೆರವಿಗೆ ಧಾವಿಸುತ್ತದೆ.
  3. ಹೊಸತಾಗಿ ಸೇರ್ಪಡೆಯಾಗಿರುವ ಲಕ್ಷಣಗಳು ಹೀಗಿವೆ: ಎಚ್ಚರಿಕೆ ಸಂದೇಶ ಸ್ವೀಕರಿಸಿದ ಕೂಡಲೇ, ಸ್ವೀಕರಿಸಲಾಗಿದೆ ಎಂಬ ಸಂದೇಶ ಮೀನುಗಾರರಿಗೆ ತಲುಪುತ್ತದೆ. ಅದರಿಂದ ತಮ್ಮ ರಕ್ಷಣೆಗೆ ಐಸಿಜಿ ಬರುತ್ತಿದೆ ಎಂಬ ಸಂದೇಶ ಮೀನುಗಾರರಿಗೆ ಸಿಗುತ್ತದೆ.
  4. ಪ್ರತಿಕೂಲ ವಾತಾವರಣ, ಚಂಡಮಾರುತ, ಸುನಾಮಿಯ ಲಕ್ಷಣವಿದ್ದಾಗ ನಿಯಂತ್ರಣ ಕೊಠಡಿಯಿಂದ ಡಿಎಟಿಗೆ ಸಂದೇಶ ಹೋಗುತ್ತದೆ. ಆಗ ಮೀನುಗಾರರು ಎಚ್ಚೆತ್ತುಕೊಳ್ಳಬಹುದು.
  5. ಎಲ್ಲಿ ಮೀನುಗಾರಿಕೆ ಮಾಡಿದರೆ ಉತ್ತಮ ಎಂಬ ಸಂದೇಶವೂ ಸಿಗುತ್ತದೆ. ಡಿಎಟಿಯನ್ನು ಬ್ಲೂಟೂತ್‌ ಮೂಲಕ ಮೊಬೈಲ್‌ಗ‌ೂ ಸಂಪರ್ಕಿಸಿಕೊಳ್ಳಬಹುದು. ಮೊಬೈಲ್‌ನಲ್ಲಿರುವ ಆ್ಯಪ್‌ ಬಳಸಿ ತಮಗೆ ಬೇಕಾದ ಭಾಷೆಯಲ್ಲಿ ಸಂದೇಶ ಓದಿಕೊಳ್ಳಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next