Advertisement

ನಾಸಾ, ಸ್ಪೇಸ್‌ ಎಕ್ಸ್‌ಗೆ ಇಸ್ರೋ ಅಭಿನಂದನೆ

07:33 AM Jun 02, 2020 | mahesh |

ಹೊಸದಿಲ್ಲಿ: ಮರು ಬಳಕೆಯಾಗಬಲ್ಲ ರಾಕೆಟ್‌ನ ಮೂಲಕ ಇಬ್ಬರು ಖಗೋಳ ಯಾತ್ರಿಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಕಳುಹಿಸಿದ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹಾಗೂ ಸ್ಪೇಸ್‌ ಎಕ್ಸ್‌ ಸಂಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿನಂದಿಸಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶದಿಂದ ಫಾಲ್ಕನ್‌ 9 ರಾಕೆಟ್‌ನಲ್ಲಿ ಅಂತರಿಕ್ಷದತ್ತ ಪ್ರಯಾಣಿಸಿದ ನಾಸಾದ ಬಾಬ್‌ ಬೆಹನ್‌ಕೆನ್‌ ಹಾಗೂ ಡೌಗ್‌ ಹರ್ಲೆ ಗಗನಯಾತ್ರಿಗಳು 19 ಗಂಟೆಗಳ ಪ್ರಯಾಣದ ನಂತರ ರವಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು (ಐಎಸ್‌ಎಸ್‌) ಸೇರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next