Advertisement

ನಭದಲ್ಲಿ ಇಸ್ರೋ ಸೆಂಚುರಿ

06:45 AM Jan 12, 2018 | Team Udayavani |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೂಂದು ಉಪಗ್ರಹ ಉಡಾವಣೆ ಕ್ಷಣ ಇದಾಗಿದೆ. ಪೊಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌-ಸಿ40 (ಪಿಎಸ್‌ಎಲ್‌ವಿ-ಸಿ40) ಉಡಾವಣಾ ವಾಹಕದ ಮೂಲಕ ಒಟ್ಟು 31 ಉಪಗ್ರಹಗಳು ಕಕ್ಷೆ ಸೇರಿಕೊಳ್ಳ ಲಿವೆ. ಇಸ್ರೋಗೆ ಇದು 100ನೇ ಉಪಗ್ರಹ ಉಡಾವಣೆ ಎನ್ನುವುದು ಒಂದು ವಿಶೇಷ ವಾದರೆ, ಡಾ| ಶಿವನ್‌ ಕೆ. ಅವರಿಗೆ ಇದು ಇಸ್ರೋ ಮುಖ್ಯಸ್ಥರಾದ ಅನಂತರದ ಮೊದಲ ಉಡಾವಣೆಯಾಗಿದೆ.

Advertisement

ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಈತನಕ 250ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.ಇದೀಗ ಶುಕ್ರವಾರ ಉಡಾವಣೆಗೊಳ್ಳಲಿರುವ ಪಿಎಸ್‌ಎಲ್‌ವಿ-ಸಿ40 ವಾಹಕದಲ್ಲಿ ಈಗಾಗಲೇ 42 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. 

ಇಸ್ರೋಗೆ ಇದೇಕೆ ಮಹತ್ವದ್ದು?: 2017, ಆಗಸ್ಟ್‌ 31ರಂದು ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ನಡೆಸಲಾಗಿದ್ದ ಉಡಾವಣೆ ವಿಫ‌ಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್‌ಎಲ್‌ವಿ ಸರಣಿ ರಾಕೆಟ್‌ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕಕ್ಷೆ ಸೇರಲಿರುವ ಉಪಗ್ರಹ ಕಾರ್ಟೊಸ್ಯಾಟ್‌ 2ಎಸ್‌: ಕಾರ್ಟೊಸ್ಯಾಟ್‌ 2ಎಸ್‌ ಇದೀಗ ಉಡಾವಣೆಯಾದ ಉಪಗ್ರಹ. ಈ ಸರಣಿಯಲ್ಲಿ ಉಡಾವಣೆ ಆಗುತ್ತಿರುವ 7ನೇ ಉಪಗ್ರಹ ಇದಾಗಿದೆ.

ಪ್ರಯೋಜನ ಏನೇನು?
ಇದೀಗ ಬಾಹ್ಯಾಕಾಶ ಸೇರಿಕೊಳ್ಳಲಿರುವ ಉಪಗ್ರಹಗಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಆನೆ ಬಲ ನೀಡಲಿದೆ. ಹೆಚ್ಚೆಚ್ಚು ಗುಣಮಟ್ಟದ ಫೋಟೋಗಳನ್ನು ರವಾನಿಸಲು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಸಹಕಾರಿಯಾಗಲಿದೆ. ಕಾಟೋìಗ್ರಾಫಿಕ್ಸ್‌ ಅಪ್ಲಿಕೇಷನ್ಸ್‌, ಅರ್ಬನ್‌ ಮತ್ತು ರೂರಲ್‌ ಅಪ್ಲಿಕೇಷನ್ಸ್‌, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ರಸ್ತೆ ಸಂಪರ್ಕ ನಿಯಂತ್ರಣ, ನೀರು ಬಳಕೆ ಸೇರಿದಂತೆ ಇವುಗಳ ಕುರಿತಾದ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಇವು ಕಾರ್ಯನಿರ್ವಹಿಸಲಿವೆ. ಕಾರ್ಟೊಸ್ಯಾಟ್‌2, 2ಎ ಮತ್ತು 2ಬಿ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ.

Advertisement

ವಿಜ್ಞಾನಿಗಳ ಮುಂದಿದ್ದ ಸವಾಲು
ಉಡಾವಣೆ ಬಳಿಕ ತಂಪು ಹಾಗೂ ಗುರುತ್ವಾಕರ್ಷಣ ಬಲ ಕಡಿಮೆ ಇರುವ ವಾತಾವರಣದಲ್ಲಿ ಎರಡೆರಡು ಬಾರಿ ಎಂಜಿನ್‌ ಆಫ್-ಆನ್‌ ಆಗಲಿದೆ. ಉಪಗ್ರಹಗಳ ಸುರಕ್ಷತಾ ದೃಷ್ಟಿಯಿಂದ ಎರಡೆರಡು ಬಾರಿ ಎಂಜಿನ್‌ ಆಫ್-ಆನ್‌ ಆಗಲಿದ್ದು, 15 ನಿಮಿಷದಲ್ಲಿ ಎಂಜಿನ್‌ ತಣ್ಣಗಾಗಲಿದ್ದು, ಸ್ಟಾರ್ಟ್‌ ಆಗಿ 46 ನಿಮಿಷಗಳ ಬಳಿಕ ಆಫ್ ಆಗಲಿದೆ. ಹೀಗಾಗಿ ಇದರ ನಿರ್ವಹಣೆ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next