Advertisement
ಅಮೆರಿಕ ಮೂಲದ ಕುಟುಂಬ ಇಸ್ರೇಲ್‌ನ ಗೋಲನ್ ಗೈಟ್ಸ್ ಪ್ರವಾಸಿ ತಾಣಕ್ಕೆ ತೆರಳಿದಾಗ ಅಲ್ಲಿ ಅವರಿಗೆ, ಸ್ಫೋಟಗೊಳ್ಳದೆ ಬಿದ್ದಿದ್ದ ಬಾಂಬ್ ಒಂದು ಸಿಕ್ಕಿದೆ.
Related Articles
Advertisement
ಅಲ್ಲಿದ್ದ ಪ್ರಯಾಣಿಕರಿಗೂ ಈ ವಿಚಾರ ತಿಳಿದುಬಂದಿದ್ದು, ಅವರೆಲ್ಲರೂ ಪ್ರಾಣರಕ್ಷಣೆಗಾಗಿ ಓಡಿ ಹೋಗಲಾರಂಭಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಲಗೇಜ್‌ಗಳ ಮೇಲೆಯೇ ಓಡಿ ಹೋಗಲು ಪ್ರಯತ್ನಿಸಿ ಬಿದ್ದು, ಗಂಭೀರ ಗಾಯ ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಂಬ್ ತಂದಿದ್ದ ಕುಟುಂಬವನ್ನು ವಿಮಾನ ನಿಲ್ದಾಣದ ಭದ್ರತಾ ಪಡೆಯು ಕೂಲಂಕುಷವಾಗಿ ವಿಚಾರಣೆ ಮಾಡಿದೆ. ಕುಟುಂಬ ಕೇವಲ ನೆನಪಿಗಾಗಿ ಬಾಂಬ್ ತಂದಿದ್ದು ಸ್ಪಷ್ಟವಾದ ನಂತರ ಅವರನ್ನು ಅಮೆರಿಕಕ್ಕೆ ಕಳುಹಿಸಿಕೊಡಲಾಗಿದೆ.