ಮಾಗಡಿ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ನನ್ನನ್ನು ನಂಬಿಕೆ ಹಾಗೂ ವಿಶ್ವಾಸ ದ್ರೋಹಿ ಎಂದಿದ್ದಾರೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರಿ ಎಚ್‌ಡಿಕೆಗೆ ನಂಬಿಕೆ ದ್ರೋಹ ಮಾಡಿಲ್ಲವೆ? ಎಂದು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಿರುವ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ ಪ್ರತ್ಯಾರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಬಾರಿ ಬಿಜೆಪಿ, ಮೂರು ಬಾರಿ ಜೆಡಿಎಸ್‌ನಿಂದ ಗೆದ್ದು, ಶಾಸಕರಾಗಿ ಅಧಿಕಾರ ಅನು ಭವಿಸಿ ರಾಜಕೀಯವಾಗಿ ಬೆಳೆದು ಈಗ ಏಕಾಏಕಿಸಿದ್ದರಾಮಯ್ಯ ನಾಯಕತ್ವ ನಂಬಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ನಂಬಿಕೆ ದ್ರೋಹವಲ್ಲವೆ? ಎಂದು ಮಾಜಿ ಶಾಸಕರನ್ನು ಪ್ರಶ್ನಿಸಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಠಾಣೆ ಯಲ್ಲಿ ಎಷ್ಟು ಪ್ರಕರಣಗಳಿವೆ. ಶಾಸಕ ಎ. ಮಂಜುನಾಥ್ ವಿರುದ್ಧ ಎಷ್ಟು ಪ್ರಕರಣಗಳಿವೆ ಎಂಬುದನ್ನು ತುಲನೆ ಮಾಡಿಕೊಳ್ಳಲಿ. ಜೈಲಿನಲ್ಲಿದ್ದ ತಮ್ಮಣ್ಣಗೌಡರನ್ನು ಬಿಡಿಸಿದ್ದು ನಾನೇ ಎಂದು ಹೇಳಿ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ ತೊರೆದ ಕೂಡಲೇ ಜೈಲಿನಿಂದ ಬಂದವನು ಎಂದು ಬಿಂಬಿಸುತ್ತಿದ್ದಾರೆ.
ಕಾನೂನು ಯಾರಪ್ಪನ ಸ್ವತ್ತಲ್ಲ. ನನ್ನ ವಿರುದ್ಧದ ಪ್ರಕರಣದಲ್ಲಿ ಗೆದ್ದಿದ್ದೇನೆ. ನ್ಯಾಯಾಲಯ ನನ್ನನ್ನು ನಿರಪರಾಧಿ ಎಂದು ಆದೇಶ ನೀಡಿದೆ. ಅಲ್ಲದೆ ತಗ್ಗಿಕುಪ್ಪೆ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಾಗಿ ಮೋಸ ಮಾಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಈಗ ಕಾಂಗ್ರೆಸ್ ತೊರೆದು ಶಾಸಕ ಎ. ಮಂಜು ನಾಥ್, ನಾಯಕತ್ವ ನಂಬಿ ಜೆಡಿಎಸ್‌ಗೆ ಸೇರ್ಪಡೆ ಯಾಗಿದ್ದೇನೆ. ವೈಯಕ್ತಿಕ ವಿಚಾರ ಬಿಡಲಿ.
ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದಿಟಛಿ ವಿಚಾರದಲ್ಲಿ ಕೈಜೋಡಿಸುವುದಾಗಿ ತಮ್ಮಣ್ಣಗೌಡ ತಿಳಿಸಿದರು. ತಾಲೂಕು ಜೆಡಿಎಸ್ ಮಹಿಳಾಧ್ಯಕ್ಷೆ ಶೈಲಜಾ, ಪುರಸಭೆ ಸದಸ್ಯ ಅಶ್ವಥ್, ಕೆಡಿಪಿ ಸದಸ್ಯ ಅಶೋಕ್, ದೇವರಾಜು, ರವಿಕುಮಾರ್ ಇದ್ದರು.