Advertisement
ರಾವಣನೇ ಜಗತ್ತಿನ ಮೊದಲ ಪೈಲಟ್. ಆತನ ಕಾಲದಲ್ಲಿ ಲಂಕೆಯಲ್ಲಿ ವಿಮಾನ ನಿಲ್ದಾಣಗಳಿದ್ದವು ಎಂದು ಲಂಕಾ ನಾಗರಿಕರು ನಂಬಿದ್ದಾರೆ. ಈ ಚರಿತ್ರೆ ಖಚಿತಪಡಿಸಿಕೊಳ್ಳಲು, ಇತಿಹಾಸ ಕಾಲದಲ್ಲಿ ಹೊಂದಿದ್ದ ತಾಂತ್ರಿಕ ಶಕ್ತಿಯನ್ನು ಅರಿಯಲು ಪ್ರಯತ್ನ ಮುಂದುವರಿಸಲಿದ್ದಾರೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೂ ಆಹ್ವಾನ ನೀಡಲಾಗಿದೆ.
Related Articles
ಶ್ರೀಲಂಕನ್ನರು ಮೊದಲು ವಿಮಾನ ಓಡಿಸಿದ್ದು ರಾವಣ ಎಂದಿದ್ದರೂ ಭಾರತೀಯ ಪುರಾಣಗಳು ಅದನ್ನು ಸಮರ್ಥಿಸುವುದಿಲ್ಲ. ಪುಷ್ಪಕ ವಿಮಾನ ಮೊದಲು ಇದ್ದಿದ್ದು ಬ್ರಹ್ಮನ ಬಳಿ. ಅನಂತರ ಅದು ವಂಶಪರಂಪರೆಯಾಗಿ ಕುಬೇರನಿಗೆ ಹೋಯಿತು. ಈತ ಇದ್ದಿದ್ದು ಮೊದಲು ಲಂಕೆಯಲ್ಲೇ. ತನ್ನ ಮಲತಾಯಿಯ ಮಗನಾದ ಕುಬೇರನಿಂದ ರಾವಣ ಆ ವಿಮಾನವನ್ನು ಬಲಾತ್ಕಾರವಾಗಿ ಕಿತ್ತುಕೊಂಡ. ರಾವಣ ಮೂಲತಃ ಉತ್ತರ ಭಾರತೀಯ. ರಾವಣನ ನಿಧನದ ನಂತರ ವಿಮಾನ ವಿಭೀಷಣನ ಪಾಲಾಯಿತು ಎನ್ನುತ್ತದೆ ವಾಲ್ಮೀಕಿ ರಾಮಾಯಣ.
Advertisement