Advertisement

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

01:31 AM Nov 25, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿಯವರು ತಮ್ಮ 116ನೇ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ನಿಸರ್ಗ ಹಾಗೂ ಪಕ್ಷಿಸಂಕುಲದ ಕುರಿತು ಅರಿವು ಮೂಡಿಸುತ್ತಿರುವ ಮೈಸೂರಿನ “ಅರ್ಲಿ ಬರ್ಡ್‌’ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

Advertisement

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ರವಿವಾರ ಪಕ್ಷಿಗಳ ಸಂರಕ್ಷಣೆಯ ಕುರಿತು ಮಾತನಾಡಿದ ಅವರು, ಮೈಸೂರಿನ ಸಂಸ್ಥೆ ಆರಂಭಿಸಿರುವ “ಅರ್ಲಿ ಬರ್ಡ್‌’ ಅಭಿಯಾನದ ಕುರಿತು ಪ್ರಸ್ತಾವಿಸಿ, “ಮಕ್ಕಳಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡಲೆಂದೇ ಈ ಸಂಸ್ಥೆ ವಿಶೇಷ ರೀತಿಯ ಗ್ರಂಥಾಲಯವೊಂದನ್ನು ಆರಂಭಿಸಿದೆ. ಅಲ್ಲದೆ ನಿಸರ್ಗದ ಕುರಿತು ಮಕ್ಕಳಲ್ಲಿ ಜವಾಬ್ದಾರಿ ಮೂಡಿಸುವ ಉದ್ದೇಶದಿಂದ ನೇಚರ್‌ ಎಜುಕೇಶನ್‌ ಕಿಟ್‌ ಸಿದ್ಧಪಡಿಸಿದೆ. ಇದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹೆಚ್ಚುತ್ತಿದೆ.

ಈ ಸಂಸ್ಥೆಯು ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ದು ಅವರಿಗೆ ವಿವಿಧ ಪಕ್ಷಿಗಳನ್ನು ಪರಿಚಯಿಸುತ್ತದೆ. ಈ ಸಂಸ್ಥೆಯ ಶ್ರಮದ ಫ‌ಲವಾಗಿ ಈಗ ಅನೇಕ ಮಕ್ಕಳು ಪಕ್ಷಿಗಳನ್ನು ಗುರುತಿಸುವಂತಾಗಿದೆ. ಇದೊಂದು ಉತ್ತಮ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next