Advertisement
ವಿವಾದ ಶುರುವಾಗಿದ್ದು ಯಾವಾಗ?ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ವರ್ಗಕ್ಕೆ ಮೀಸಲಾತಿ ನೀಡುವ ವಿವಾದ ಈಗಿನದ್ದಲ್ಲ. 2010ರಲ್ಲೇ ಈ ಬಗ್ಗೆ ಸುಪ್ರೀಂ ಕೋರ್ಟ್
ಒಬಿಸಿ ಮೀಸಲಾತಿ ಸಂಬಂಧ ಏನೇ ವಿವಾದ ನಡೆದಿದ್ದರೂ ಅವಧಿ ಮೀರಿ ಚುನಾವಣೆ ಮುಂದೂಡುವಂತಿಲ್ಲ ಎಂದು ಸೂಚನೆ ನೀಡಿದೆ. ಟ್ರಿಪಲ್ ಟೆಸ್ಟ್ ನಡೆಸಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯ ಚುನಾವಣ ಆಯೋಗಗಳು ಒಂದಷ್ಟು ಸ್ಥಾನಗಳನ್ನು ಓಪನ್ ಕೆಟಗೆರಿಗಳೆಂದು ಗುರುತಿಸಿ ಚುನಾವಣೆ ನಡೆಸಬೇಕು. ಇದೇ ಕಾರಣಕ್ಕಾಗಿ ಚುನಾವಣೆ ನಿಲ್ಲಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
Related Articles
1.ಪ್ರಾಯೋಗಿಕವಾಗಿ ಅಧ್ಯಯನ ನಡೆಸದೇ ಒಬಿಸಿಗಳಿಗೆ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ.
Advertisement
2.ಆರ್‌ಆರ್ ವಾಘ… ವರ್ಸಸ್ ಮಹಾರಾಷ್ಟ್ರ ಸರಕಾರ ಪ್ರಕರಣದ ಅನ್ವಯ ನೀಡಲಾಗಿರುವ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ. ಅಂದರೆ ಯಾವ ರೀತಿ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಸುಪ್ರೀಂ ಮಾರ್ಗಸೂಚಿ ನೀಡಿದ್ದು, ಇದರ ಅನ್ವಯವೇ ಮೀಸಲಾತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಎಲ್ಲ ರಾಜ್ಯಗಳೂ ಇದನ್ನೇ ಪಾಲನೆ ಮಾಡಬೇಕಾಗುತ್ತದೆ.
ನಿಯಮಗಳ ದ್ವಂದ್ವವಿಕಾಸ್ ಕೃಷ್ಣರಾವ್ ಗವಾಲಿ ವರ್ಸಸ್ ಮಹಾರಾಷ್ಟ್ರ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಬೇರೆಯದ್ದೇ ತೀರ್ಪು ನೀಡಿದೆ. ಅಲ್ಲದೆ, 2010ರಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಮಹಾರಾಷ್ಟ್ರ ಸರಕಾರ ಪಾಲನೆ ಮಾಡಿಲ್ಲ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಕೆಲವೊಂದು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾವಿಸಿದೆ. ಅಂದರೆ ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾತಿ ಕೇವಲ ಆಯಾ ರಾಜ್ಯ ಸರಕಾರಗಳು ನೀಡಿರುವಂಥದ್ದಾಗಿದೆ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯಷ್ಟೇ ಸಾಂವಿಧಾನಿಕವಾಗಿದೆ ಎಂದಿದೆ. ಹೀಗಾಗಿಯೇ 2010ರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದ್ದ ಯಾವುದೇ ಅಂಶಗಳನ್ನು ಪಾಲನೆ ಮಾಡದೇ ಇರುವುದರಿಂದ ಮಹಾರಾಷ್ಟ್ರ ಚುನಾವಣಾ ಆಯೋಗ ಹೊರಡಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಆದರೂ, ಮಹಾ ಸರಕಾರ ಅಧ್ಯಾದೇಶ ಮೂಲಕ ಚುನಾವಣೆಯನ್ನು ನಡೆಸಿದೆ. ಇದಾದ ಮೇಲೆ ಬಾಂಬೆ ಹೈಕೋರ್ಟ್‌ನಲ್ಲಿ ಅಧ್ಯಾದೇಶವನ್ನು ಪ್ರಶ್ನಿಸಲಾಗಿದ್ದು, ಇದಕ್ಕೆ ತಡೆ ನೀಡಲಾಗಿದೆ. ಆದರೆ ಚುನಾವಣ ಪ್ರಕ್ರಿಯೆ ಮಾತ್ರ ನಿಂತಿರಲಿಲ್ಲ. ಹೀಗಾಗಿ ಮೀಸಲಾತಿಯ ಸೀಟ್‌ಗಳ ಪ್ರಕ್ರಿಯೆ ಮಾತ್ರ ಸ್ಥಗಿತವಾಗಿದೆ. ಮಧ್ಯಪ್ರದೇಶದಲ್ಲೂ ಇದೇ ರೀತಿಯ ವಿವಾದವಾಗಿದ್ದು, ಅಲ್ಲಿಯೂ ಮೀಸಲಾತಿ ಸ್ಥಾನಗಳ ಚುನಾವಣೆಗೆ ಮರು ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಹೇಳಿದೆ.