Advertisement
ಜನಾರ್ದನ ರೆಡ್ಡಿ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಜತೆಗೆ, ಆಂಧ್ರ, ತೆಲಂಗಾಣದೊಂದಿಗೆ ನಿಕಟ ಸಂಬಂಧ ಹೊಂದಿರುವ ಮೇರೆಗೆ ಬಹುತೇಕ ಆ ಭಾಗದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಆಧಾರದಲ್ಲಿ ಪೊಲೀಸರು ದಿಕ್ಕು ತಪ್ಪಲಿ ಎಂದು ಲೆಕ್ಕಾಚಾರ ಹಾಕಿರುವ ಜನಾರ್ದನ ರೆಡ್ಡಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಪೊಲೀಸರ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಂಬಂಧ ಅಲ್ಲಿನ ಪೊಲೀಸರಿಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಸಿಸಿಬಿ ಪೊಲೀಸರು ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಸೈಬರಾಬಾದ್ ಪೊಲೀಸ್ ಆಯುಕ್ತ, ವಿ.ಸಿ ಸಜ್ಜ ನರ್, ಜನಾರ್ದನ ರೆಡ್ಡಿ ಹೈದರಾಬಾದ್, ಸೈಬರಾ ಬಾದ್‌ನಲ್ಲಿ ಅಡಗಿಕೊಂಡಿರುವ ಅಥವಾ ಅವರನ್ನು ವಶಕ್ಕೆ ಪಡೆಯುವ ಸಂಬಂಧ ಬೆಂಗಳೂರು ಪೊಲೀಸರು ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಆ ವಿಚಾರದ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ರೀತಿ ಹೈದರಾಬಾದ್‌ನ ಹೆಸರು ಹೇಳಲು ಇಚ್ಛಿಸದ ಡಿಸಿಪಿ ಒಬ್ಬರು, ರೆಡ್ಡಿ ವಿಚಾರದ ಬಗ್ಗೆ ಬೆಂಗಳೂರು ಪೊಲೀಸರಿಂದ ನಮಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು. ಜನಾರ್ದನ ರೆಡ್ಡಿ ಆಂದ್ರದಲ್ಲಿ ಅಡಗಿಕೊಂಡಿದ್ದು, ಅಲ್ಲಿಗೆ ವಿಶೇಷ ತಂಡ ಹೋಗಿರುವುದು ಖಚಿತಪಡಿ ಸಿಕೊಳ್ಳಲು ನಿರಾಕರಿಸಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಅದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
Related Articles
ಆ್ಯಂಬಿಡೆಂಟ್ ಕಂಪೆನಿಯ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಫರೀದ್ ಹಲವು ಮಂದಿ ಪ್ರಭಾವಿಗಳ ಹೆಸರನ್ನು ಬಹಿರಂಗಪಡಿ ಸಿದ್ದಾನೆ ಎನ್ನಲಾಗಿದೆ. ಜತೆಗೆ, ಆ್ಯಂಬಿಡೆಂಟ್ ಕಂಪನಿ ಹೊರತಾಗಿ ಅಕ್ರಮ ವ್ಯವಹಾರಗಳನ್ನು ನಡೆಸಿದ್ದತೆ ಬಹಿರಂಗಪಡಿಸುವಂತೆಯೂ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಮಾಧ್ಯಮದವರನ್ನು ನೋಡಿ ಓಟಕ್ಕಿತ್ತ ಫರೀದ್:ವಿಚಾರಣೆ ಪೂರ್ಣಗೊಂಡ ಬಳಿಕ ಸಿಸಿಬಿ ಕಚೇರಿಯಿಂದ ಹೊರ ಬಂದ ಫರೀದ್ ಮಾಧ್ಯಮ ಪ್ರತಿನಿಧಿಗಳನ್ನು ನೋಡಿದ ಕೂಡಲೇ ಪುನ: ಕಚೇರಿ ಒಳಕ್ಕೆ ಓಡಿದ ಪ್ರಸಂಗ ನಡೆಯಿತು. ಬಳಿಕ ಪೊಲೀಸರ ಜೀಪಿನಲ್ಲಿಯೇ ಆತನನ್ನು ಮನೆ ತಲುಪಿಸಲಾಯಿತು. ಸೈಯದ್ ಫರೀದ್ ವಿಚಾರಣೆ ವೇಳೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಪ್ರಕರಣದ ತನಿಖಾ ಭಾಗವಾಗಿ ಹಲವು ತಂಡಗಳು ಕಾರ್ಯರಣೆ ನಡೆಸುತ್ತಿವೆ. ತನಿಖಾ ಭಾಗವಾಗಿ ಬೇರೆ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
● ಅಲೋಕ್ ಕುಮಾರ್, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಜಾಮೀನಿಗೆ ಇಂದು ಅರ್ಜಿ?
ಜನಾರ್ದನ ರೆಡ್ಡಿ ನಿರೀಕ್ಷಣಾ ಜಾಮೀನು ಕೋರಿ ಶುಕ್ರವಾರ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಮೂಲ ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿರುವುದರಿಂದ ಇಲ್ಲಿನ ಸ್ಥಳೀಯ ನ್ಯಾಯಾಲಯ ದಲ್ಲಿ ಜಾಮೀನು ಅರ್ಜಿ
ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ರೆಡ್ಡಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಿದಟಛಿತೆ ನಡೆಸಿದ್ದಾರೆ. ಮಾಹಿತಿ ಕೋರಿದ ಇ.ಡಿ.
ಆ್ಯಂಬಿಡೆಂಟ್ ಕಂಪನಿಯಿಂದ ನೂರಾರು ಕೋಟಿ ರೂ. ವಂಚನೆ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಮತ್ತು ದಾಖಲೆ ನೀಡುವಂತೆ ಜಾರಿ ನಿರ್ದೇಶನಾಲಯ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳನ್ನು ಕೋರಿದೆ. ಪ್ರಕರಣ ಕುರಿತು ದಾಖಲಿಸಿರುವ ಎಫ್ಐಆರ್‌ಗಳು ಹಾಗೂ ಪ್ರಕರಣದ ಪ್ರಸ್ತುತ ತನಿಖಾ ಹಂತದ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ. ಜತೆಗೆ ಇಸ್ಲಾಮಿಕ್ ಅಥವಾ ಹಲಾಲ್ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಬಗ್ಗೆ ಆರ್‌ಬಿಐಗೂ ಮಾಹಿತಿ ನೀಡಿದೆ.