Advertisement

Irani Cup: ಶೇಷ ಭಾರತಕ್ಕೆ ಋತುರಾಜ್‌ ಗಾಯಕ್ವಾಡ್‌ ನಾಯಕ

11:25 PM Sep 24, 2024 | Team Udayavani |

ಹೊಸದಿಲ್ಲಿ: ರಣಜಿ ಚಾಂಪಿಯನ್‌ ಮುಂಬಯಿ ವಿರುದ್ಧ ಆಡಲಾಗುವ “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯಕ್ಕಾಗಿ ಶೇಷ ಭಾರತ ತಂಡ ಪ್ರಕಟ ಗೊಂಡಿದೆ. ಋತುರಾಜ್‌ ಗಾಯಕ್ವಾಡ್‌ ನಾಯಕರಾಗಿದ್ದಾರೆ.

Advertisement

ಈ ತಂಡದಲ್ಲಿ ಕರ್ನಾಟಕದ ಇಬ್ಬರು ಅವಕಾಶ ಪಡೆದಿದ್ದಾರೆ. ಇವರೆಂದರೆ ದೇವದತ್‌ ಪಡಿಕ್ಕಲ್‌ ಮತ್ತು ಪ್ರಸಿದ್ಧ್ ಕೃಷ್ಣ.

ಭಾರತದ ಟೆಸ್ಟ್‌ ತಂಡದಲ್ಲಿರುವ ಧ್ರುವ ಜುರೆಲ್‌ ಮತ್ತು ಯಶ್‌ ದಯಾಳ್‌ ಕೂಡ ಶೇಷ ಭಾರತ ತಂಡದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಸಿಗದೇ ಹೋದರೆ ಇವರು ಇರಾನಿ ಕಪ್‌ನಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಸಾಲಿನಲ್ಲಿರುವ ಮತ್ತೋರ್ವ ಆಟಗಾರ ಸಫ‌ìರಾಜ್‌ ಖಾನ್‌. ಅವರು ಟೆಸ್ಟ್‌ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆಯದಿದ್ದರೆ ಮುಂಬಯಿ ಪರ ಆಡುವ ಸಾಧ್ಯತೆ ಇದೆ.

ಮುಂಬಯಿಯ ಸೂರ್ಯಕುಮಾರ್‌ ಯಾದವ್‌, ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ನಾಯಕರಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆ ಇರುವುದರಿಂದ ಇರಾನಿ ಕಪ್‌ನಲ್ಲಿ ಆಡುವುದಿಲ್ಲ.

ಇರಾನಿ ಕಪ್‌ ಪಂದ್ಯ ಅ. ಒಂದರಿಂದ 5ರ ತನಕ ಲಕ್ನೋದಲ್ಲಿ ನಡೆಯಲಿದೆ. ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ ಸೆ. 27ರಂದು ಕಾನ್ಪುರದಲ್ಲಿ ಆರಂಭವಾಗಲಿದೆ. ಇತ್ತಂಡಗಳ ನಡುವಿನ ಟಿ20 ಸರಣಿ ಅ. 6ರಂದು ಮೊದಲ್ಗೊಳ್ಳಲಿದೆ.

Advertisement

ಶೇಷ ಭಾರತ ತಂಡ: ಋತುರಾಜ್‌ ಗಾಯಕ್ವಾಡ್‌ (ನಾಯಕ), ಅಭಿಮನ್ಯು ಈಶ್ವರನ್‌, ಸಾಯಿ ಸುದರ್ಶನ್‌, ದೇವದತ್ತ ಪಡಿಕ್ಕಲ್‌, ಧ್ರುವ ಜುರೆಲ್‌, ಇಶಾನ್‌ ಕಿಶನ್‌, ಮಾನವ್‌ ಸುಥಾರ್‌, ಸಾರಾಂಶ್‌ ಜೈನ್‌, ಪ್ರಸಿದ್ಧ್ ಕೃಷ್ಣ, ಮುಕೇಶ್‌ ಕುಮಾರ್‌, ಯಶ್‌ ದಯಾಳ್‌, ರಿಕಿ ಭುಯಿ, ಶಾಶ್ವತ್‌ ರಾವತ್‌, ಖಲೀಲ್‌ ಅಹ್ಮದ್‌, ರಾಹುಲ್‌ ಚಹರ್‌.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆಯುಷ್‌ ಮ್ಹಾತ್ರೆ, ಮುಶೀರ್‌ ಖಾನ್‌, ಸಫ‌ìರಾಜ್‌ ಖಾನ್‌, ಶ್ರೇಯಸ್‌ ಅಯ್ಯರ್‌, ಸಿದ್ದೇಶ್‌ ಲಾಡ್‌, ಸೂರ್ಯಾಂಶ್‌ ಶೇಡ್ಗೆ, ಹಾರ್ದಿಕ್‌ ತಮೋರೆ, ಸಿದ್ಧಾಂತ್‌ ಆದತ್‌ರಾವ್‌, ಶಮ್ಸ್‌ ಮುಲಾನಿ, ತನುಷ್‌ ಕೋಟ್ಯಾನ್‌, ಹಿಮಾಂಶು ಸಿಂಗ್‌, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಅವಸ್ತಿ, ಮೊಹಮ್ಮದ್‌ ಜುನೇದ್‌ ಖಾನ್‌, ರಾಯ್‌ಸ್ಟನ್‌ ಡಾಯಸ್‌.

Advertisement

Udayavani is now on Telegram. Click here to join our channel and stay updated with the latest news.

Next