Advertisement
2013ರ ಸಾಲಿನ ಮೊದಲ ಟೈ ಪಂದ್ಯ ನಡೆದದ್ದು ಆರ್‌ಸಿಬಿ-ಹೈದರಾಬಾದ್ ನಡುವೆ. ಸ್ಥಳ ಹೈದರಾಬಾದ್‌ನ “ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’. ಇದರಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಪಡೆ 8 ವಿಕೆಟಿಗೆ 130 ರನ್ ಗಳಿಸಿದರೆ, ಕುಮಾರ ಸಂಗಕ್ಕರ ಬಳಗ 7 ವಿಕೆಟಿಗೆ 130 ರನ್ ಮಾಡಿತು. ಬಳಿಕ ಸೂಪರ್ ಓವರ್‌ನಲ್ಲಿ ಅದೃಷ್ಟವನ್ನು ತೆರೆದಿಟ್ಟಿತು.
ಪಂದ್ಯ ಅಂತಿಮ ಓವರ್ ತಲಪುವಾಗ ಹೈದರಾಬಾದ್ ಜಯಕ್ಕೆ ಕೇವಲ 7 ರನ್ ಅಗತ್ಯವಿತ್ತು. ಬೌಲರ್ ವಿನಯ್ ಕುಮಾರ್. ಕ್ರೀಸ್‌ನಲ್ಲಿದ್ದವರು ಹನುಮ ವಿಹಾರಿ ಮತ್ತು ಆಶಿಷ್ ರೆಡ್ಡಿ. ವಿಹಾರಿ ಆಗಲೇ 44 ಎಸೆತಗಳಿಂದ 42 ರನ್ ಬಾರಿಸಿ ಸೆಟ್ಲ ಆಗಿದ್ದರು. ಹೀಗಾಗಿ ಹೈದರಾಬಾದ್ ಮುಂದೆ ಗೆಲುವಿನ ಅವಕಾಶ ಹೆಚ್ಚಿತ್ತು. ಆದರೆ ಕೊನೆಯಲ್ಲಿ ಸಂಭವಿಸಿದ್ದೇ ಬೇರೆ. ವಿನಯ್ ಕುಮಾರ್ ಮೊದಲ ಎಸೆತದಲ್ಲೇ ಆಶಿಷ್ ರೆಡ್ಡಿ (14) ವಿಕೆಟ್ ಉಡಾಯಿಸಿದರು. ಅನಂತರ ಕ್ರೀಸ್ ಇಳಿದ ಡೇಲ್ ಸ್ಟೇನ್ ತಾನೆದುರಿಸಿದ ಮೊದಲ ಎಸೆತದಲ್ಲಿ 2 ರನ್ ತೆಗೆದರು. ಮೂರನೆಯದು ಡಾಟ್ ಬಾಲ್. 4ನೇ ಎಸೆತದಲ್ಲಿ ಸಿಂಗಲ್ ಸಿಕ್ಕಿತು.
Related Articles
Advertisement
ಇದೊಂದು ನಿಧಾನ ಗತಿಯ ಎಸೆತವಾಗಿತ್ತು. ಹನುಮ ವಿಹಾರಿ ಅವರನ್ನು ವಂಚಿಸಿತು. ಆದರೆ ಕಣ್ಮುಚ್ಚಿಕೊಂಡು ಒಂದು ರನ್ನಿಗಾಗಿ ಓಡಿದರು. ಬೈ ರನ್ ಸಿಕ್ಕಿಯೇ ಬಿಟ್ಟಿತು; ಪಂದ್ಯ ಟೈ ಆಯಿತು!
ಸೂಪರ್ ಓವರ್ವಿನಯ್ ಕುಮಾರ್ ಅಲ್ಲೇನೋ ಯಶಸ್ವಿಯಾದರು. ಆದರೆ ಸೂಪರ್ ಓವರ್‌ನಲ್ಲಿ ದುಬಾರಿಯಾದರು. ಕ್ಯಾಮರಾನ್ ವೈಟ್ ಸಿಡಿದು ನಿಂತರು. ಹೈದರಾಬಾದ್ 20 ರನ್ ಬಾಚಿತು. ಹೈದರಾಬಾದ್ ಪರ ಸೂಪರ್ ಓವರ್ ಎಸೆದವರು ಡೇಲ್ ಸ್ಟೇನ್. ಬ್ಯಾಟರ್ ಗೇಲ್ ಮತ್ತು ಕೊಹ್ಲಿ. 5 ಎಸೆತಗಳಿಂದ 14 ರನ್ ಬಂತು. ಅಂತಿಮ ಎಸೆತದಲ್ಲಿ ಸಿಕ್ಸರ್ ಅನಿವಾರ್ಯವಾಯಿತು. ಆಗ ಸೂಪರ್ ಓವರ್ ಕೂಡ ಟೈ ಆಗುತ್ತಿತ್ತು. ಆದರೆ ಗೇಲ್ ವಿಫಲರಾದರು. ಅವರಿಗೆ ಗಳಿಸಲು ಸಾಧ್ಯವಾದದ್ದು ಒಂದೇ ರನ್. ಹೀಗೆ ಆತಿಥೇಯ ಸನ್‌ರೈಸರ್ ಹೈದರಾಬಾದ್ ಸೂಪರ್ ಪ್ರದರ್ಶನ ನೀಡಿ ಗೆದ್ದು ಬಂದಿತು. ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ಕ್ರಿಸ್ ಗೇಲ್ ಸಿ ಪಟೇಲ್ ಬಿ ವಿಹಾರಿ 1
ತಿಲಕರತ್ನೆ ದಿಲ್ಶನ್ ಬಿ ಇಶಾಂತ್ 5
ವಿರಾಟ್ ಕೊಹ್ಲಿ ಸಿ ಮತ್ತು ಬಿ ರೆಡ್ಡಿ 46
ಕರುಣ್ ನಾಯರ್ ಎಲ್‌ಬಿಡಬ್ಲ್ಯು ಮಿಶ್ರಾ 9
ಮೊಸಸ್ ಹೆನ್ರಿಕ್ಸ್ ಸಿ ವೈಟ್ ಬಿ ಇಶಾಂತ್ 44
ಅಗರ್ವಾಲ್ ಸಿ ಅಂಕಿತ್ ಬಿ ಸ್ಟೇನ್ 7
ಅರುಣ್ ಕಾರ್ತಿಕ್ ಸಿ ರೆಡ್ಡಿ ಬಿ ಪೆರೆರ 0
ವಿನಯ್ ಕುಮಾರ್ ಸಿ ಸಂಗಕ್ಕರ ಬಿ ಇಶಾಂತ್ 7
ಮುರಳಿ ಕಾರ್ತಿಕ್ ಔಟಾಗದೆ 2
ಜೈದೇವ್ ಉನಾದ್ಕತ್ ಔಟಾಗದೆ 1
ಇತರ 8
ಒಟ್ಟು (8 ವಿಕೆಟಿಗೆ) 130
ವಿಕೆಟ್ ಪತನ: 1-8, 2-22, 3-42, 4-85, 5-108, 6-114, 7-125, 8-127.
ಬೌಲಿಂಗ್:
ಡೇಲ್ ಸ್ಟೇನ್ 4-0-37-1
ಹನುಮ ವಿಹಾರಿ 1-0-5-1
ಇಶಾಂತ್ ಶರ್ಮ 4-0-27-3
ಅಂಕಿತ್ ಶರ್ಮ 2-0-17-0
ತಿಸರ ಪೆರೆರ 4-0-21-1
ಅಮಿತ್ ಮಿಶ್ರಾ 4-0-15-1
ಆಶಿಷ್ ರೆಡ್ಡಿ 1-0-7-1 ಸನ್‌ರೈಸರ್ ಹೈದರಾಬಾದ್
ಅಕ್ಷತ್ ರೆಡ್ಡಿ ಬಿ ಮುರಳೀಧರನ್ 23
ಪಾರ್ಥಿವ್ ಪಟೇಲ್ ಸಿ ಕಾರ್ತಿಕ್ ಬಿ ಹೆನ್ರಿಕ್ಸ್ 2
ಕ್ಯಾಮರಾನ್ ವೈಟ್ ಸಿ ಮುರಳಿ ಬಿ ಹೆನ್ರಿಕ್ಸ್ 5
ಹನುಮ ವಿಹಾರಿ ಔಟಾಗದೆ 44
ಕುಮಾರ ಸಂಗಕ್ಕರ ಸಿ ಕಾರ್ತಿಕ್ ಬಿ ಉನಾದ್ಕತ್ 16
ತಿಸರ ಪೆರೆರ ಸಿ ಹೆನ್ರಿಕ್ಸ್ ಬಿ ಉನಾದ್ಕತ್ 7
ಅಮಿತ್ ಮಿಶ್ರಾ ರನೌಟ್ 0
ಆಶಿಷ್ ರೆಡ್ಡಿ ಸಿ ಕೊಹ್ಲಿ ಬಿ ವಿನಯ್ 14
ಡೇಲ್ ಸ್ಟೇನ್ ಔಟಾಗದೆ 3
ಇತರ 16
ಒಟ್ಟು (7 ವಿಕೆಟಿಗೆ) 130
ವಿಕೆಟ್ ಪತನ: 1-4, 2-20, 3-48, 4-81, 5-98, 6-101, 7-124.
ಬೌಲಿಂಗ್:
ಜೈದೇವ್ ಉನಾದ್ಕತ್ 4-0-24-2
ಮೊಸಸ್ ಹೆನ್ರಿಕ್ಸ್ 3-0-14-2
ಮುರಳಿ ಕಾರ್ತಿಕ್ 4-0-27-0
ವಿನಯ್ ಕುಮಾರ್ 4-0-27-1
ಮುತ್ತಯ್ಯ ಮುರಳೀಧನ್ 4-0-18-1
ತಿಲಕರತ್ನೆ ದಿಲ್ಶನ್ 1-0-10-0
ಪಂದ್ಯಶ್ರೇಷ್ಠ: ಹನುಮ ವಿಹಾರಿ