Advertisement

ರಾಜಸ್ಥಾನ್‌ ದಾಳಿಗೆ ಪರದಾಡಿದ ಚೆನ್ನೈ; ರಾಜಸ್ಥಾನ್‌ ಗೆ 126 ರನ್ ಗೆಲುವಿನ ಗುರಿ

12:07 PM Nov 03, 2015 | mahesh |

ಅಬುಧಾಬಿ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಸೋಮವಾರದ ಐಪಿಎಲ್‌ ಮುಖಾಮುಖಿಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟಿಗೆ ಕೇವಲ 125 ರನ್‌ ಗಳಿಸಿದೆ.

Advertisement

ಚೆನ್ನೈ ತಂಡದ ಬ್ಯಾಟಿಂಗ್‌ ನಿರ್ಧಾರವನ್ನು ವೇಗಿ ಜೋಫ್ರ ಆರ್ಚರ್‌ ತಲೆ ಕೆಳಗಾಗಿಸಿದರು. ಮೊದಲ 2 ಓವರ್‌ಗಳಲ್ಲಿ ಕೇವಲ 5 ರನ್‌ ನೀಡಿದ ಅವರು ಫಾ ಡು ಪ್ಲೆಸಿಸ್‌ (10) ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಶೇನ್‌ ವಾಟ್ಸನ್‌ (8) ಕೂಡ ಕ್ರೀಸ್‌ ಆಕ್ರಮಸಿಕೊಳ್ಳಲು ವಿಫ‌ಲರಾದರು. ಪವರ್‌ ಪ್ಲೇ ಅವಧಿಯಲ್ಲಿ ಎರಡು ದೊಡ್ಡ ವಿಕೆಟ್‌ ಕಳೆದುಕೊಂಡ ಧೋನಿ ಪಡೆ ಸಂಕಟಕ್ಕೆ ಸಿಲುಕಿತು.

ಆರಂಭಕಾರ ಸ್ಯಾಮ್‌ ಕರನ್‌ ಕ್ರೀಸ್‌ ಆರಂಭಿಸುವ ಸೂಚನೆಯನ್ನೇನೋ ನೀಡಿದರು. ಆದರೆ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಅಂಬಾಟಿ ರಾಯುಡು ಮೊದಲ ಎಸೆತದಲ್ಲೇ ಲೆಗ್‌ ಬಿಫೋರ್‌ ಸಾಧ್ಯತೆಯಿಂದ ಪಾರಾದರು. ಆದರೆ ಇದರ ಪ್ರಯೋಜನ ಎತ್ತಲು ಅವರಿಂದ ಸಾಧ್ಯವಾಗಲಿಲ್ಲ. 13 ರನ್‌ ಮಾಡಿ ತೆವಾತಿಯಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಆಗ ಸರಿಯಾಗಿ ಅರ್ಧ ಹಾದಿ ಮುಗಿದಿತ್ತು. ಚೆನ್ನೈ ಕೇವಲ 56 ರನ್ನಿಗೆ 4 ವಿಕೆಟ್‌ ಉರುಳಿಸಿಕೊಂಡ ಸಂಕಟದಲ್ಲಿತ್ತು.

5ನೇ ವಿಕೆಟಿಗೆ ಒಟ್ಟುಗೂಡಿದ ಧೋನಿ ಮತ್ತು ಜಡೇಜ 7.4 ಓವರ್‌ಗಳ ಜತೆಯಾಟ ನಡೆಸಿದರೂ ಹರಿದು ಬಂದದ್ದು 51 ರನ್‌ ಮಾತ್ರ. 30 ಎಸೆತಗಳಿಂದ 35 ರನ್‌ ಮಾಡಿದ ಜಡೇಜ ಅವರದೇ ಚೆನ್ನೈ ಸರದಿಯ ಗರಿಷ್ಠ ಮೊತ್ತ (4 ಬೌಂಡರಿ). 200ನೇ ಐಪಿಎಲ್‌ ಪಂದ್ಯ ಆಡಲಿಳಿದ ಧೋನಿ ಎಸೆತಕ್ಕೊಂದರಂತೆ 28 ರನ್‌ ಮಾಡಿದರು (2 ಬೌಂಡರಿ). ಅಮೋಘ ರನ್‌ ನಿಯಂತ್ರಣ ಸಾಧಿಸಿದ ಗೋಪಾಲ್‌ ಚೆನ್ನೈ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದರು. 4 ಓವರ್‌ಗಳ ಸ್ಪೆಲ್‌ನಲ್ಲಿ ಅವರು ನೀಡಿದ್ದು 14 ರನ್‌ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next