Advertisement

IPL : ಸನ್ ರೈಸರ್ಸ್ ಎದುರು ರಾಹುಲ್ ಬಳಗಕ್ಕೆ 5 ವಿಕೆಟ್ ಗಳ ಜಯ

10:52 PM Apr 07, 2023 | Team Udayavani |

ಲಕ್ನೋ : ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ ನ 10 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರು ಕೆ.ಎಲ್. ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್ ಗಳ ಜಯ ಸಾಧಿಸಿದೆ.

Advertisement

ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಫಲತೆಯನ್ನು ಅನುಭವಿಸಿ 8 ವಿಕೆಟ್ ನಷ್ಟಕ್ಕೆ 121 ರನ್ ಗಳನ್ನು ಮಾತ್ರ ಗಳಿಸಿ ಕಡಿಮೆ ಗುರಿಯನ್ನು ಮುಂದಿಟ್ಟಿತು. ಆರಂಭಿಕ ಆಟಗಾರ ಅನ್ಮೋಲ್ಪ್ರೀತ್ ಸಿಂಗ್ 31, ಮಯಾಂಕ್ ಅಗರ್ವಾಲ್ 8 ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಠಿ 35, ನಾಯಕ ಐಡೆನ್ ಮಾರ್ಕ್ರಾಮ್ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್ ಸುಂದರ್ 16, ಅಬ್ದುಲ್ ಸಮದ್ ಔಟಾಗದೆ 21 ರನ್ ಗಳಿಸಿದರು. ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದರು. ಅಮಿತ್ ಮಿಶ್ರಾ 2 , ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 16 ಓವರ್ ಗಳಲ್ಲಿ 5ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಜಯ ಸಾಧಿಸಿ ಸಂಭ್ರಮಿಸಿತು. ಕೈಲ್ ಮೇಯರ್ಸ್ 13, ನಾಯಕ KL ರಾಹುಲ್ 35, ದೀಪಕ್ ಹೂಡಾ 7, ಕೃನಾಲ್ ಪಾಂಡ್ಯ 34, ಮಾರ್ಕಸ್ ಸ್ಟೊಯಿನಿಸ್ ಔಟಾಗದೆ 10, ನಿಕೋಲಸ್ ಪೂರನ್ ಔಟಾಗದೆ 11 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next