Advertisement

ಆರ್‌ಸಿಬಿ ಅಭಿಮಾನಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದಳು ನಲ್ಲೆ!

10:32 PM May 05, 2022 | Team Udayavani |

ಪುಣೆ: ಕ್ರಿಕೆಟ್‌ ಸ್ಟೇಡಿಯಂಗಳಲ್ಲಿ ಪ್ರೇಮ ನಿವೇದನೆ ಮಾಡುವ ಟ್ರೆಂಡ್‌ ಈಗೀಗ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ಕ್ರಿಕೆಟಿನ ಸಾಮಾನ್ಯ ಅಭಿಮಾನಿಗಳಿಬ್ಬರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಇವರಿಗೆ ಬೇಕಾಗಿ ರುವುದೂ ಇದೇ ಎಂಬುದು ಬೇರೆ ಮಾತು!

Advertisement

ಆರ್‌ಸಿಬಿ-ಚೆನ್ನೈ ನಡುವಿನ ಬುಧವಾರದ ಪಂದ್ಯದ ವೇಳೆ ಪುಣೆಯ “ಎಂಸಿಎ ಕ್ರೀಡಾಂಗಣ’ ಇದಕ್ಕೊಂದು ತಾಜಾ ನಿದರ್ಶನ ಒದಗಿಸಿತು. ಚೆನ್ನೈ ಆರಂಭಕಾರ ಡೇವನ್‌ ಕಾನ್ವೆ ಅವರಿಗೆ ವನಿಂದು ಹಸರಂಗ ಬೌಲಿಂಗ್‌ ಮಾಡುತ್ತಿದ್ದ ವೇಳೆ ದಿಢೀರನೇ ಯುವತಿಯೊಬ್ಬಳು ಆರ್‌ಸಿಬಿ ಅಭಿಮಾನಿಯಾಗಿರುವ ತನ್ನ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದಳು. ಅಷ್ಟೇ ಅಲ್ಲ, ಉಂಗುರವನ್ನೂ ತೊಡಿಸಿದಳು. ಬಳಿಕ ಇಬ್ಬರೂ ಆಲಂಗಿಸಿಕೊಂಡು ಪ್ರೇಮದ ಪಯಣದ ಆರಂಭಕ್ಕೆ ಮುಂದಾದರು. ಕ್ಯಾಮರಾ ಕಣ್ಣುಗಳು ಇವರತ್ತ ತಿರುಗಿದಾಗ ಸ್ಟೇಡಿಯಂನಲ್ಲಿದ್ದವರೆಲ್ಲರೂ ಹರ್ಷೋ ದ್ಗಾರ ಮಾಡಿದರು. ಈ ವಿದ್ಯಮಾನ ವೀಕ್ಷಕ ವಿವರಣೆ ಮೂಲಕವೂ ಬಿತ್ತರಗೊಂಡಿತು.ಈ ದೃಶ್ಯಾವಳಿ ಈಗ ವೈರಲ್‌ ಆಗಿದೆ.

“ಆರ್‌ಸಿಬಿಯ ಕಟ್ಟಾ ಅಭಿಮಾನಿಗಳು ಉತ್ತಮ ಗಂಡನಾಗಲು ಯೋಗ್ಯರು. ಕಾರಣ, ಅವರು ಒಬ್ಬರಿಗೇ ಬಹಳ ನಿಷ್ಠಾವಂತರಾಗಿರುತ್ತಾರೆ’ ಎಂಬ ಪಂಚಿಂಗ್‌ ಲೈನ್‌ಗಳು ಹರಿದಾಡುತ್ತಿವೆ. ಟ್ವೀಟ್‌ ಮಾಸ್ಟರ್‌, ಮಾಜಿ ಕ್ರಿಕೆಟಿಗ ವಾಸಿಂ ಜಾಫ‌ರ್‌ ಕೂಡ ಇಂಥದೇ ತಮಾಷೆಯ ಸಾಲುಗಳನ್ನು ಪೋಸ್ಟ್‌ ಮಾಡಿದ್ದಾರೆ. “ಬುದ್ಧಿವಂತ ಹುಡುಗಿ ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್‌ ಮಾಡಿದ್ದಾಳೆ. ಗೆಳೆಯ ಆರ್‌ಸಿಬಿಗೆ ಅತ್ಯಂತ ನಿಷ್ಠನಾಗಿ ಇರುತ್ತಾನೆಂದರೆ ಜತೆಗಾರ್ತಿಯೊಂದಿಗೆ ನಿಷ್ಠೆಯಿಂದಲೇ ಇರುತ್ತಾನೆ ಶುಭವಾಗಲಿ…’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next