Advertisement
ವೃಷಭ: ಎಚ್ಚರಿಕೆಯಿಂದ ಮುಂದುವರಿದರೆ ಯಶಸ್ಸು ಖಚಿತ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ಸಮಾಧಾನ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ.
Related Articles
Advertisement
ಕನ್ಯಾ: ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ. ನೆನೆದದ್ದು ನೆನೆದಂತೆ ಆದರೆ ಪರಮಾನಂದ. ವ್ಯವಹಾರಸ್ಥರಿಗೆ ನಿರೀಕ್ಷಿತ ವಲಯಗಳಿಂದ ಸಕಾಲಿಕ ನೆರವು. ಗೃಹಿಣಿಯರ ಮಹತ್ವಾಕಾಂಕ್ಷೆಗೆ ಪೂರಕ ವಾತಾವರಣ.
ತುಲಾ: ಪಂಚಮ ಶನಿಯ ಪ್ರಭಾವ ಇದ್ದರೂ ಅಂಜಬೇಕಾಗಿಲ್ಲ. ದೇವತಾರ್ಚನೆ, ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ. ಆಪ್ತವಲಯದಲ್ಲಿ ಶುಭಕಾರ್ಯಕ್ಕೆ ಸಿದ್ಧತೆ.
ವೃಶ್ಚಿಕ: ಬಯಸಿದ್ದು ಬಯಸಿದಂತೆ ಆಗದಿದ್ದರೂ ಒಟ್ಟಿನಲ್ಲಿ ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ಮಿತ್ರರಿಂದ ಶುಭವಾರ್ತೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಕ್ಷೇಮ.
ಧನು: ಎಣಿಸಿದ ಸಮಯಕ್ಕೆ ಸರಿಯಾಗಿ ಕಾರ್ಯ ಮುಕ್ತಾಯ. ಹಿರಿಯರ ಮತ್ತು ಗೃಹಿಣಿಯರಿಗೆ ಸ್ವಾವಲಂಬನೆಯ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಅಲ್ಪಕಾಲೀನ ಹೂಡಿಕೆಗಳಿಂದ ಲಾಭ.
ಮಕರ: ಅನಿರೀಕ್ಷಿತ ಬೆಳವಣಿಗೆಗಳಿಂದ ಆತಂಕಗೊಳ್ಳಬೇಡಿ. ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಉದ್ಯೋಗಾ ನ್ವೇಷಣೆ ಫಲಿಸುವ ನಿರೀಕ್ಷೆ. ಜ್ಯೋತಿಷಿಗಳ ಲೆಕ್ಕಾಚಾರ ತಪ್ಪುವ ಸಾಧ್ಯತೆ. ಸಂಸಾರದಲ್ಲಿ ಮಾನಸಿಕ ನೆಮ್ಮದಿ.
ಕುಂಭ: ನಿರಾತಂಕದ ದಿನಚರಿಗಳು.ಉದ್ಯೋಗ, ವ್ಯವಹಾರಗಳಲ್ಲಿ ನಾವೀನ್ಯ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ. ಮನೆಯಲ್ಲಿ ಉಲ್ಲಾಸದ ವಾತಾವರಣ.
ಮೀನ: ಏಳೂವರೆ ಶನಿಯ ಪ್ರಭಾವವಿದ್ದರೂ ಶುಭಫಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರ ಆದಾಯ. ಸಂಗಾತಿಯಿಂದ ಎಲ್ಲ ವ್ಯವಹಾರಗಳಿಗೆ ಪ್ರೋತ್ಸಾಹ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ಕ್ಷೇತ್ರ ದರ್ಶನದಿಂದ ಮನಸ್ಸಿಗೆ ನೆಮ್ಮದಿ.