Advertisement

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

11:34 PM Oct 01, 2020 | mahesh |

ದುಬಾಯಿ: ಮುಂಬೈ ಇಂಡಿಯನ್ಸ್ ನೀಡಿದ 192 ರನ್ ಸವಾಲನ್ನು ಬೆನ್ನತ್ತುವಲ್ಲಿ ಸಂಪೂರ್ಣವಾಗಿ ವಿಫಲವಾದ ಕಿಂಗ್ಸ್ ಇಲೆವೆನ್ ಪಂಜಾಬ್ 49 ರನ್ ಗಳ ಸೋಲನ್ನು ಅನುಭವಿಸಿದೆ.

Advertisement

ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭಿಕರಾದ ನಾಯಕ ಲೋಕೇಶ್ ರಾಹುಲ್ ಮಾಯಾಂಕ್ ಅಗರ್ವಾಲ್ ಉತ್ತಮ ಮೊತ್ತ ಪೇರಿಸುವ ಭರವಸೆಯಲ್ಲಿರುವಾಗಲೇ ಅಗರ್ವಾಲ್ (25) ರನ್ ಜಸ್ಪ್ರೀತ್ ಬುಮ್ರಾ ಗೆ ವಿಕೆಟ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಲೋಕೇಶ್ ರಾಹುಲ್ (17), ನಾಯರ್(0), ನಿಕೋಲಸ್ ಪೂರನ್ (44), ಗ್ಲೆನ್ ಮ್ಯಾಕ್ಸ್ ವೆಲ್ (11) ರನ್ ಗೆ ವಿಕೆಟ್ ಒಪ್ಪಿಸಿ ಮುಂಬೈ ಇಂಡಿಯನ್ಸ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು.

ಪ್ರಾರಂಭದಿಂದಲೇ ಪಂಜಾಬ್ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಮುಂಬೈ ಇಂಡಿಯನ್ಸ್ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ರಾಯಲ್ಸ್ 121 ರನ್ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್ ಗಳನ್ನು ಕಳೆದುಕೊಂಡು ಆಲೌಟಾಗುವ ಭೀತಿಗೆ ಸಿಲುಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next