Advertisement

ಕೆಕೆಆರ್‌ ನಾಯಕತ್ವಕ್ಕೆ ರಾಬಿನ್‌-ಲಿನ್‌ ನಡುವೆ ಪೈಪೋಟಿ

06:25 AM Feb 20, 2018 | Team Udayavani |

ಕೋಲ್ಕತಾ: ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಪ್ರಮುಖ ತಂಡವಾಗಿರುವ ಬಾಲಿವುಡ್‌ ಖ್ಯಾತ ನಟ ಶಾರುಖ್‌ ಖಾನ್‌ ಒಡೆತನದ ಕೆಕೆಆರ್‌ (ಕೋಲ್ಕತಾ ನೈಟ್‌ ರೈಡರ್) ತಂಡಕ್ಕೆ ಕೋಚ್‌ ಆಗಲು ಸಿದ್ಧ ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲೀನ್‌ ಹೇಳಿದ್ದಾರೆ. 

Advertisement

ಇತ್ತೀಚೆಗೆ ತಂಡದ ಪ್ರಮುಖ ಆಟಗಾರನಾಗಿರುವ ಕರ್ನಾಟಕದ ರಾಬಿನ್‌ ಉತ್ತಪ್ಪ ಕೂಡ ನಾಯಕತ್ವ ನೀಡಿದರೆ ಯಶಸ್ವಿಯಾಗಿ ನಿಭಾಯಿಸುವೆ ಎಂದಿದ್ದರು. ಈ ಬೆನ್ನಲ್ಲೇ ಕ್ರಿಸ್‌ ಲಿನ್‌ ಹೇಳಿಕೆ ನೀಡಿದ್ದು ಕೋಲ್ಕತಾ ನೈಟ್‌ ರೈಡರ್ ತಂಡದ ನಾಯಕತ್ವಕ್ಕೆ ಇಬ್ಬರು ಆಟಗಾರರ ನಡುವೆ ಪೈಪೋಟಿ ಇದೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿಂದೆ ಕೆಕೆಆರ್‌ ತಂಡವನ್ನು ಗೌತಮ್‌ ಗಂಭೀರ್‌ ಮುನ್ನಡೆಸಿದ್ದರು. ಸದ್ಯ ಗಂಭೀರ್‌  ಅವರು ಕೆಕೆಆರ್‌ನಿಂದ ಔಟಾಗಿ ದಿಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next