Advertisement

ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಆಹ್ವಾನ

12:00 AM Apr 25, 2020 | Sriram |

ಹೊಸದಿಲ್ಲಿ: ಭಾರತದ ಸುಸ್ಥಿರ ಮಾನವ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಬಾಹ್ಯಾಕಾಶ ಅನ್ವೇಷಣೆ ಕುರಿತಂತೆ ಸ್ವದೇಶಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.

Advertisement

2022ರ ವೇಳೆಗೆ ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ,’ಗಗನಯಾನ’ ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತ ಸಿದ್ಧತೆಗಳನ್ನು ಕೈಗೊಂಡಿದೆ. ಈ ಸಂಬಂಧ ಈಗಾ ಗಲೇ ಭಾರ ತೀಯ ವಾಯು ಪಡೆಯ ನಾಲ್ವರು ಪೈಲಟ್‌ಗಳಿಗೆ ಮಾಸ್ಕೋದಲ್ಲಿ ತರಬೇತಿ ನೀಡಲಾಗುತ್ತಿದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಪ್ರಸ್ತುತ 18 ತಾತ್ಕಾಲಿಕ ಅಥವಾ ಪ್ರಾಯೋಗಿಕ ತಂತ್ರಜ್ಞಾನ ಅಭಿವೃದ್ಧಿ ವಲಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಪ್ರಸ್ತಾವನೆಗಳನ್ನು ಸಲ್ಲಿಸಲು ಜು.15 ಕೊನೆಯ ದಿನವಾಗಿದೆ. ವಿಕಿರಣದ ಅಪಾಯಗಳ ಲಕ್ಷಣಗಳು ಮತ್ತು ಅದನ್ನು ತಗ್ಗಿಸುವ ವಿಧಾನ, ಬಾಹ್ಯಾಕಾಶ ಆಹಾರ ಮತ್ತು ಸಂಬಂಧಿಸಿದ ತಂತ್ರಜ್ಞಾನಗಳು, ಮಾನವ ರೋಬೋಟಿಕ್‌ ಇಂಟರ್‌ಫೇಸ್‌ಗಳು,ಲೆ„ಫ್‌ ಸಪೋರ್ಟ್‌ ಸಿಸ್ಟಮ್ಸ್‌, ಮನೋವಿಜ್ಞಾನ ವಲಯಗಳಿಗೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next