ಹೊಸದಿಲ್ಲಿ: “ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ತೋರುತ್ತಿರುವ ಉತ್ಸಾಹ ಹಾಗೂ ಅಭೀಪ್ಸೆಗಳು, ವಿಶ್ವ ವಾಣಿಜ್ಯ ರಂಗದಲ್ಲಿ ಭಾರತದೊಟ್ಟಿಗೆ ಕೈ ಜೋಡಿಸಿರುವ ಸಹಭಾಗಿಗಳಿಗೆ ಹೊಸ ಚೈತನ್ಯ ತಂದಿದೆ. ಹಾಗಾಗಿ, ಭಾರತದಲ್ಲಿ ಹೂಡಿಕೆ ಮಾಡಲು ಇದು ನಿಜಕ್ಕೂ ಸುವರ್ಣಾವಕಾಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ವಾಣಿಜ್ಯೋ ದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
“ವಿಶ್ವ ಆರ್ಥಿಕ ಶೃಂಗದ ದಾವೋಸ್ ಅಜೆಂಡಾ’ ಸಮ್ಮೇಳನದಲ್ಲಿ ವೀಡಿಯೋ ಕಾನ್ಫ ರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, “ಭಾರತದಲ್ಲಿ ಯುವೋದ್ಯಮಿಗಳು ಹೆಚ್ಚಾಗಿ ಅಸ್ತಿತ್ವಕ್ಕೆ ಬರುತ್ತಿದ್ದಾರೆ. 2014ರ ಹೊತ್ತಿಗೆ ಭಾರತದಲ್ಲಿ ಕೇವಲ ನೂರಾರು ಮಾತ್ರವೇ ಇದ್ದ ಸ್ಟಾರ್ಟ್‌ಅಪ್‌ಗ್ಳು ಈಗ 60 ಸಾವಿರ ದಾಟಿದೆ. 2021ರಲ್ಲೇ 80 ಯೂನಿ ಕಾರ್ನ್ ಸ್ಟಾರ್ಟ್‌ಅಪ್‌ಗಳು ಸೃಷ್ಟಿಯಾಗಿರು ವುದು ನಿಜಕ್ಕೂ ಹೆಮ್ಮೆಯ ವಿಚಾರ. ಮತ್ತೊಂದೆಡೆ, ಭಾರತ ಸರಕಾರ ಕೂಡ ಭಾರತೀಯ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಮುಂದಿನ 25 ವರ್ಷ ಗಳವರೆಗೆ ಯಾವುದೇ ಅಡೆತಡೆಯಾಗದಂಥ ಕಾನೂನು, ಶಾಸನಗಳನ್ನು ರೂಪಿಸುತ್ತಿದೆ. ಜತೆಗೆ ಭಾರತವನ್ನು ಮಾಲಿನ್ಯ ಮುಕ್ತ ರಾಷ್ಟ್ರ ವನ್ನಾಗಿಸಲು ಹಲವಾರು ಕ್ರಮ ಗಳನ್ನು ಜಾರಿ ಗೊಳಿಸಿದೆ. ಇದೆಲ್ಲವೂ ಹೂಡಿಕೆಗೆ ಪೂರಕವಾದ ವಾತಾವರಣವಾಗಿವೆ’ ಎಂದರು.
ಐಟಿ ರಂಗಕ್ಕೆ ಶ್ಲಾಘನೆ: ಕೊರೊನಾದ ಇಂಥ ಸಂಕಷ್ಟದ ಸಂದರ್ಭದಲ್ಲೂ ಭಾರತದ ಮಾಹಿತಿ ತಂತ್ರಜ್ಞಾನ ರಂಗವು ಹಗಲು – ರಾತ್ರಿ ದುಡಿ ಯುವ ಮೂಲಕ ವಿಶ್ವಕ್ಕೆ ತಂತ್ರಜ್ಞಾನದ ಕೊರತೆ ಯಾಗದಂತೆ ತನ್ನದೊಂದು ಕಾಣಿಕೆ ನೀಡಿದೆ. ಕಳೆದ ವರ್ಷ ಭಾರತ ರೂಪಿಸಿರುವ ಡಿಜಿಟಲ್ ಇನ್‌ಫ್ರಾ ಯೋಜನೆಯು ಭಾರತದ ಐಟಿ ರಂಗಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಕೋವಿನ್ ಹಾಗೂ ಆರೋಗ್ಯ ಸೇತು ಅಪ್ಲಿಕೇಶನ್‌ಗಳು ಭಾರತದ ಐಟಿ ರಂಗದ ಹಿರಿಮೆಗಳಾಗಿವೆ ಎಂದು ತಿಳಿಸಿದರು.
ಭಾರತ ಶತಪ್ರಯತ್ನ: ಇದೇ ವೇಳೆ, ಕೊರೊನಾ ಪರಿಸ್ಥಿತಿಯನ್ನು ವಿಶ್ಲೇಷಿಸಿದ ಅವರು, “ಕೊರೊ ನಾದ ಈ ಕಾಲಘಟ್ಟದಲ್ಲಿ ವಿಶ್ವದ ಹಲವಾರು ಬಡರಾಷ್ಟ್ರಗಳಿಗೆ ಆಹಾರ ಮತ್ತು ಕೊರೊನಾ ಔಷಧಿಗಳನ್ನು ಒದಗಿಸುವ ಮೂಲಕ ತನ್ನ ಶಕ್ತಿಯನ್ನು ಜಗತ್ತಿನ ಮುಂದೆ ಸಾಬೀತುಪಡಿ ಸಿದೆ. ನಾನಾ ದೇಶಗಳ ವಿಜ್ಞಾನಿಗಳು ಹಾಗೂ ಆರೋಗ್ಯ ಸೇವಕರು ಶ್ರಮಿಸುತ್ತಿ ದ್ದಾರೆ. ಭಾರತ ದಲ್ಲೂ ಈ ಹೋರಾಟ ಮಂಚೂಣಿಯಲ್ಲಿದ್ದು 160 ಕೋಟಿ ಡೋಸ್ ಲಸಿಕೆ ನೀಡಲಾಗಿದೆ’ ಎಂದರು.
ಒಂದು ಭೂಮಿ, ಒಂದು ಆರೋಗ್ಯ: “ಭಾರತದ ಮಹತ್ವಾಕಾಂಕ್ಷೆಯ ಪರಿಕಲ್ಪನೆ ಯಾದ ಒಂದು ಭೂಮಿ, ಒಂದು ಆರೋಗ್ಯ ದಡಿ, ವಿಶ್ವದ ವಿವಿಧ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಗಳನ್ನು ರವಾನಿಸುವ ಮೂಲತ
ನಾವಿಂದು ಲಕ್ಷಾಂತರ ಜೀವಗಳನ್ನು ಉಳಿಸಿ ದ್ದೇವೆ. ನಮ್ಮ ವೈದ್ಯರು, ಶುಶ್ರೂಷಕರು ಜನರ ವಿಶೇಷ ಗೌರವಾದರಣೆಗಳನ್ನು ಪಡೆ ಯುತ್ತಿ ದ್ದಾರೆ’ ಎಂದರು.