Advertisement

ಟ್ರೆಂಡಿಂಗ್: ಫ್ರೊಫೆಸರ್ ಆಗಿ ಬದಲಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

08:38 AM May 26, 2021 | Team Udayavani |

ನವದೆಹಲಿ: ವಿರಾಟ್ ಕೊಹ್ಲಿಯ ಫೋಟೋ ಒಂದನ್ನು, ‘ಮನಿ ಹೈಸ್ಟ್’ ವೆಬ್ ಸೀರೀಸ್ ನ ಫ್ರೊಫೆಸರ್ ನ ಮಾದರಿಯಲ್ಲೇ ಚಿತ್ರಿಸಿ ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ, ಇದೀಗ ಈ ಫೋಟೋ ಭಾರಿ ವೈರಲ್ ಆಗುತ್ತಿದೆ.

Advertisement

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ನೆಟ್ ಫ್ಲಿಕ್ಸ್ ಓಟಿಟಿ ಫ್ಲ್ಯಾಟ್ ಫಾರ್ಮ್ ನ ‘ಮನಿ ಹೈಸ್ಟ್’ ಕೂಡ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸೀರೀಸ್ ಎನಿಸಿಕೊಂಡಿದೆ.ಇಲ್ಲಿ ವಿರಾಟ್ ಕೊಹ್ಲಿಯಂತೆ ಫ್ರೊಫೆಸರ್ ಪಾತ್ರಧಾರಿ ಕೂಡ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ.

ವೈರಲ್ ಫೋಟೋದಲ್ಲಿ ವಿರಾಟ್ ಕೊಹ್ಲಿ ಕನ್ನಡಕ ಧರಿಸಿ, ಗಡ್ಡ, ಉದ್ದ ಕೂದಲು ಬಿಟ್ಟು ಥೇಟ್ ಫ್ರೊಫೆಸರ್ ಮಾದರಿಯಲ್ಲೇ ಕಾಣುತ್ತಿದ್ದಾರೆ. ಈ  ಫೋಟೋವನ್ನು ಅಭಿಮಾನಿಗಳು ಫ್ರೊಫೆಸರ್ ಗೆ ಹೋಲಿಸಿದ್ದಾರೆ. ಹೀಗಾಗಿ ಈ ಕುರಿತು  ಮೀಮ್ ಗಳು, ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಂಚಲನ ಸೃಷ್ಟಿಸಿದೆ.

Advertisement

ಏತನ್ಮಧ್ಯೆ ಜನಪ್ರಿಯ ಮನಿ ಹೈಸ್ಟ್ ವೆಬ್ ಸೀರೀಸ್ 5ನೇ ಮತ್ತು ಕೊನೆಯ ಭಾಗ ರಿಲೀಸ್ ಡೇಟ್ ಪ್ರಕಟವಾಗಿದ್ದು, ವಾಲ್ಯೂಮ್ ಒಂದು ಸೆಪ್ಟೆಂಬರ್ 3 ಹಾಗೂ ವಾಲ್ಯೂಮ್ 2 ಡಿಸೆಂಬರ್ 3 , 2021ರಂದು ಬಿಡುಗಡೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next