Advertisement

ಪಣಜಿ: ನ.20 ರಿಂದ ನ.28 ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

12:34 PM Nov 09, 2022 | Team Udayavani |

ಪಣಜಿ: ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ ನವೆಂಬರ್ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ.

Advertisement

ಅಂತರಾಷ್ಟ್ರೀಯ ಸ್ಪರ್ಧಾತ್ಮಕ ವಿಭಾಗದಲ್ಲಿ 15 ಚಲನಚಿತ್ರಗಳು ಪ್ರತಿಷ್ಠಿತ ಸುವರ್ಣ ಮಯೂರ್ ಪ್ರಶಸ್ತಿ ಸ್ಫರ್ಧೆಯಲ್ಲಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವವು  ಆಸ್ಟ್ರಿಯನ್ ನಿರ್ದೇಶಕ ಡೈಟರ್ ಬರ್ನರ್ ಅವರ ಚಲನಚಿತ್ರದೊಂದಿಗೆ ಪ್ರಾರಂಭವಾಗಲಿದೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವು  ಆಸ್ಟ್ರಿಯಾದ ನಿರ್ದೇಶಕ ಡೈಟರ್ ಬರ್ನರ್ ಅವರ ‘ಅಲ್ಮಾ ಮತ್ತು ಆಸ್ಕರ್’ ಚಿತ್ರದೊಂದಿಗೆ ಪ್ರಾರಂಭವಾಗಲಿದೆ. ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿಯಲ್ಲಿ ಇಸ್ರೇಲಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್, ಅಮೇರಿಕನ್ ಚಲನಚಿತ್ರ ನಿರ್ಮಾಪಕ ಜಿಂಕೊ ಗೊಟೊಹ್, ಫ್ರೆಂಚ್ ಚಲನಚಿತ್ರ ಸಂಗ್ರಾಹಕ ಪಾಸ್ಕಲ್ ಚವಾನ್ಸ್, ಫ್ರೆಂಚ್ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ವಿಮರ್ಶಕ ಮತ್ತು ಪತ್ರಕರ್ತ ಜೇವಿಯರ್ ಅಂಗುಲೋ ಬುರ್ಚುರೆನ್ ಮತ್ತು ಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕ ಸುದೀಪ್ಟೊ ಒಳಗೊಂಡಿದ್ದಾರೆ ಎಂದು ಗೋವಾ ಮನೋರಂಜನಾ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಚಂದ್ರು ಸಾವು ಪ್ರಕರಣ: ತನಿಖಾ ವರದಿ ಬಂದ ಬಳಿಕವೇ ಮುಂದಿನ ತೀರ್ಮಾನ; ಸಿಎಂ ಬೊಮ್ಮಾಯಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next