Advertisement

ಕಾಂಗ್ರೆಸ್‌ ಕಲ್ಪನೆಗೆ ಅಭದ್ರತೆಯ ಮುಸುಕು: ಪ್ರಮೋದ್‌

06:25 AM Dec 29, 2017 | Team Udayavani |

ಉಡುಪಿ: ಕಾಂಗ್ರೆಸ್‌ ಪಕ್ಷಕ್ಕೆ 133 ವರ್ಷಗಳ ಇತಿಹಾಸವಿದೆ. ಕಾಂಗ್ರೆಸ್‌ ಯಾವ ಉದ್ದೇಶಕ್ಕಾಗಿ ಸ್ಥಾಪನೆಗೊಂಡಿತ್ತೋ ಆ ಕಲ್ಪನೆಗೆ ಅಭದ್ರತೆಯ ಮುಸುಕು ಆವರಿಸಿದೆ. ಜಾತ್ಯತೀತ ಚಿಂತನೆಯಲ್ಲಿ ನಂಬಿಕೆ ಇಲ್ಲದ ಆಡಳಿತರೂಢ ಬಿಜೆಪಿ ಪಕ್ಷವು ಸಮಾಜವನ್ನು ವಿಭಜನೆ ಮಾಡುವತ್ತ ಪ್ರೇರೇಪಿಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು. ಕಾಂಗ್ರೆಸ್‌ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಾಂಗ್ರೆಸ್‌ ಪಕ್ಷವು ಪ್ರಥಮವಾಗಿ ಸ್ವಾತಂತ್ರ್ಯಕ್ಕಾಗಿ ಹೊರಾಡಿದರೆ ಸ್ವಾತಂತ್ರ್ಯ ಗಳಿಸಿದ ಅನಂತರ ಭದ್ರ ಬುನಾದಿಯೊಂದಿಗೆ ದೇಶವನ್ನು ಕಟ್ಟುವ ಕಾರ್ಯಕ್ಕೆ ತೊಡಗಿಸಿಕೊಂಡಿತು. ಪಕ್ಷದ ಮುಖಂಡರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತ್ತು. ಸ್ವಾತಂತ್ರಾéನಂತರ ಹುಟ್ಟಿಕೊಂಡ ಪಕ್ಷಗಳು ಸ್ವಾರ್ಥದೊಂದಿಗೆ ಹುಟ್ಟಿದ ಪಕ್ಷಗಳಾಗಿವೆ. ಅಭಿವೃದ್ಧಿಯೊಂದಿಗೆ ಸಹಬಾಳ್ವೆ, ಸಹಚಿಂತನೆ, ಸಮಾನತೆಯನ್ನು ಕಂಡುಕೊಂಡ ಭಾರತ ದೇಶದಲ್ಲಿ ಇಂದು ವೈಷಮ್ಯವನ್ನು ಬಿತ್ತುವ, ಅನಾಗರಿಕ ಹೇಳಿಕೆಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಹಬಾಳ್ವೆ ಚಿಂತನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಕಾಂಗ್ರೆಸ್‌ ಪಕ್ಷದ ಮೇಲಿದೆ ಎಂದರು.

ಪಕ್ಷದ ಮುಖಂಡರಾದ ಜನಾರ್ದನ ತೋನ್ಸೆ, ಕೃಷ್ಣರಾಜ ಸರಳಾಯ, ದಿನೇಶ್‌ ಪುತ್ರನ್‌, ಬಿ. ನರಸಿಂಹಮೂರ್ತಿ, ಸತೀಶ್‌ ಅಮೀನ್‌ ಪಡುಕರೆ, ಪ್ರಖ್ಯಾತ್‌ ಶೆಟ್ಟಿ, ಶ್ಯಾಮಲಾ ಭಂಡಾರಿ, ಜಯಶ್ರೀ ಕೃಷ್ಣರಾಜ್‌, ಶಂಕರ್‌ ಕುಂದರ್‌, ಉದ್ಯಾವರ ನಾಗೇಶ್‌ ಕುಮಾರ್‌, ಕೀರ್ತಿ ಶೆಟ್ಟಿ, ಯತೀಶ್‌ ಕರ್ಕೇರ, ಹಬೀಬ್‌ ಅಲಿ, ಶಶಿಧರ ಶೆಟ್ಟಿ ಎಲ್ಲೂರು, ಇಬ್ರಾಹಿಂ ಕಾಪು, ಸುಂದರ್‌ ಶೆಣೈ ಕೋಟ, ಕೃಷ್ಣಪ್ಪ ಪೂಜಾರಿ, ಪೃಥ್ವಿರಾಜ್‌ ಶೆಟ್ಟಿ, ವಿಶ್ವಾಸ್‌ ವಿ. ಅಮೀನ್‌ ಪಡುಬಿದ್ರಿ, ಪ್ರಶಾಂತ್‌ ಪೂಜಾರಿ, ಸಾಯಿರಾಜ್‌, ಆಕಾಶ್‌ ರಾವ್‌, ಸುಜಯ ಪೂಜಾರಿ, ಗಣೇಶ್‌ ನೆರ್ಗಿ ಮತ್ತಿತರರು ಉಪಸ್ಥಿತರಿದ್ದರು. ಭಾಸ್ಕರ್‌ ರಾವ್‌ ಕಿದಿಯೂರು  ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next