Advertisement

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

11:47 PM Nov 16, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರ ಮೈಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್‌ ಖಾನ್‌ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹಿತ ಕಾಂಗ್ರೆಸ್‌ನ ಅನೇಕರು ಖಂಡಿಸಿದ್ದಾರೆ. ಸಾರ್ವಜನಿಕವಾಗಿ ಕುಮಾರಸ್ವಾಮಿ ಅವರನ್ನು “ಕರಿಯ’ ಎಂದದ್ದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಶನಿವಾರ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್‌, ಜಮೀರ್‌ ಹಾಗೂ ಕುಮಾರಸ್ವಾಮಿ ನಡುವೆ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಕಪ್ಪು-ಬಿಳುಪು ಎಂದೆಲ್ಲ ಮಾತನಾಡುವುದು ಸರಿಯಲ್ಲ. ಪಕ್ಷದ ಅಧ್ಯಕ್ಷನಾಗಿ ಜಮೀರ್‌ ಮಾತನಾಡಿದ್ದು ತಪ್ಪು ಎಂದು ಹೇಳುತ್ತಿದ್ದೇನೆ. ತಪ್ಪು ತಪ್ಪೇ. ಆಂತರಿಕವಾಗಿ ಜಮೀರ್‌ ಜತೆ ಮಾತನಾಡಿದ್ದೇನೆ, ಕ್ಷಮೆ ಕೇಳಿದ್ದಾರೆ ಎಂದರು. ಅವರು ಕೊಚ್ಚೆ ಎಂದದ್ದು ಸರಿಯೋ, ಇವರು ಕರಿಯ ಎಂದದ್ದು ತಪ್ಪೋ ಎಂಬುದನ್ನು ಜನ ತೀರ್ಮಾನಿಸಲಿ. ಆದರೆ ಜಮೀರ್‌ ಸಾರ್ವಜನಿಕವಾಗಿ ನೀಡಿದ ಆ ಹೇಳಿಕೆಯಂತೂ ಸರಿಯಲ್ಲ ಎಂದು ಖಂಡಿಸಿದರು.

ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಪುಟ್ಟಣ್ಣ ಪ್ರತಿಕ್ರಿಯಿಸಿ, ನಾಲ್ಕು ಗೋಡೆ ಮಧ್ಯೆ ಏನೇ ಮಾತನಾಡಿದರೂ ಚೆನ್ನಾಗಿರುತ್ತದೆ. ಪರಸ್ಪರ ಚೆನ್ನಾಗಿದ್ದಾಗ ಏಕವಚನ ಬಳಸಿದರೂ ಅಮೃತ ಇದ್ದಂತೆ ಇರುತ್ತದೆ. ವ್ಯತ್ಯಾಸ ಬಂದಾಗ ಸುಮ್ಮನೆ ನೋಡಿದರೂ ದುರುಗುಟ್ಟಿ ನೋಡಿದ ಎನ್ನುತ್ತಾರೆ. ಸಾರ್ವಜನಿಕವಾಗಿ ಹಾಗೆಲ್ಲ ಹೇಳುವುದು ಸರಿಯಲ್ಲ ಎಂದರು.

“ಕುಮಾರಸ್ವಾಮಿ ಹೇಳಿಕೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತೇ ಆಗುವುದಿಲ್ಲ. ಅವರು ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಹೇಳಿಕೆ ಕೊಡುತ್ತಾರೆ. ಹಾಗಾಗಿ ಪ್ರತಿಕ್ರಿಯಿಸದೆ ಇರುವುದೇ ಉತ್ತಮ.” – ಡಾ| ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next