Advertisement

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

02:37 AM Nov 11, 2024 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್‌ ಅಭಯ ಹಸ್ತದಿಂದ  ವಕ್ಫ್ ಎಂಬ ಭೂತ ಭಯಾನಕವಾಗಿ ಹರಡುತ್ತಿದೆ. ಈ ಬಗ್ಗೆ ಹಿಂದೂಗಳು ಒಗ್ಗಟ್ಟಾಗಬೇಕು. ಎಚ್ಚರ ವಹಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಶ್ರೀರಾಮಸೇನೆ 21ನೇ ವರ್ಷದ ದತ್ತಮಾಲಾ ಅಭಿಯಾನ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಇಲ್ಲದಿದ್ದರೆ ಮುಂದೊಂದು ದಿನ ಹಿಂದೂ ರಾಷ್ಟ್ರ ಇಸ್ಲಾಂ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ರೈತರ ಜಮೀನು ಪಹಣಿಯಲ್ಲಿ ವಕ್ಫ್ ಬೋರ್ಡ್‌ ಆಸ್ತಿ ಎಂದು ನಮೂದಾಗಿದೆ. ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೊಟೀಸ್‌ ಹಿಂಪಡೆಯುವುದಾಗಿ ಮತ್ತು ದಾಖಲೆ ತಿದ್ದುಪಡಿ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ರೈತರ ಜಮೀನನ್ನು  ವಕ್ಫ್ ಬೋರ್ಡ್‌ ಕಬಳಿಸಲು ಮುಂದಾಗಿರುವುದು ಸತ್ಯ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದರು.

ರಾಜ್ಯ ಸರ್ಕಾರ ರೈತರಿಗೆ ನೋಟಿಸ್‌ ನೀಡುವುದಲ್ಲ. ಬದಲಾಗಿ ಮಲ್ಲಿಕಾರ್ಜುನ ಖರ್ಗೆ, ದಿ|ಧರ್ಮಸಿಂಗ್‌ ಅವರ ಪುತ್ರ, ಶಾಸಕ ಸಿ.ಎಂ.ಇಬ್ರಾಹಿಂ, ರೋಷನ್‌ ಬೇಗ್‌, ಹ್ಯಾರಿಸ್‌ ಸೇರಿದಂತೆ ಅನೇಕರು ವಕ್ಫ್ ಬೋರ್ಡ್‌ ಆಸ್ತಿ ಹೊಡೆದಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಏಕೆ ನೊಟೀಸ್‌ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಅವರಿಗೆ ನೊಟೀಸ್‌ ನೀಡಲಿ ಎಂದು ಸವಾಲು ಹಾಕಿದರು.

ಸಚಿವ ಜಮೀರ್‌ ಅಹಮದ್‌ ಅವರನ್ನು ಔರಂಗಜೇಬ್‌ಗ ಹೋಲಿಸಿದ ಮುತಾಲಿಕ್‌, ಔರಂಗಜೇಬ್‌ ಶಿವಾಜಿ ಕಾಲಘಟ್ಟದಲ್ಲಿ ನಾಶವಾಗಿದ್ದನ್ನು ಮರೆಯಬಾರದು. ಹಿಂದೂ ಸಮಾಜ ಜೀವಂತವಾಗಿದೆ. ಜಮೀರ್‌ ಅಹಮದ್‌ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ 25 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next