Advertisement

3 ತಿಂಗಳಲ್ಲಿ ರಾಜಧಾನಿ ಚಿತ್ರಣ ಬದಲು

12:10 PM Apr 28, 2017 | Team Udayavani |

ಬೆಂಗಳೂರು: ನಗರದ ಅಭಿವೃದ್ಧಿಗೆ ಹಲವು ಕಾಮಗಾರಿ­ಗಳನ್ನು ಕೈಗೆತ್ತಿಕೊಂಡಿದ್ದು, ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು ನಗರದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದರು. 

Advertisement

ರಸ್ತೆ ಡಾಂಬರೀಕರಣ, ಒಳಚರಂಡಿ, ಕುಡಿಯುವ ನೀರು ಸೇರಿ 18ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಎದುರು ಗುರುವಾರ ಚಾಲನೆ ನೀಡಿ ಮಾತನಾಡಿ, ನಗರ­ದಲ್ಲಿ ನಿತ್ಯ ಒಂದಿಲ್ಲ ಒಂದು ಕಾಮ­ಗಾರಿ ಆರಂ­ಭವಾಗುತ್ತಿದ್ದು, ತ್ವರಿತ­ಗತಿ­ಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸಿಎಂ ಅನುದಾನ ಮತ್ತು ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ­ಗಳನ್ನು ಆರಂಭಿಸಿದ್ದು, ಮುಂದಿನ 3 ತಿಂಗಳ ನಂತರ ನಗರದ ಜನತೆ ಗುಂಡಿ ಮುಕ್ತ ರಸ್ತೆಗಳು, ಸುಂದರ­ವಾದ ಪಾದಚಾರಿ ಮಾರ್ಗಗಳನ್ನು ಕಾಣಲಿದ್ದಾರೆ ಎಂದರು.

ನಂತರ ಮಾತನಾಡಿದ ಶಾಸಕ ಸತೀಶ್‌ ರೆಡ್ಡಿ, ಶೀಘ್ರವೇ ಬೇಗೂರು ಮತ್ತು ಬನ್ನೇರುಘಟ್ಟ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಜತೆಗೆ ಕಳಪೆ ಕಾಮಗಾರಿ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದೊಮ್ಮೆ ಕಳಪೆ ನಡೆಸಿರುವುದು ಗಮನಕ್ಕೆ ಬಂದಲ್ಲಿ, ಆರಂಭದಿಂದ ಕಾಮಗಾರಿ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ವಿಲ್ಸನ್‌ ಗಾರ್ಡನ್‌ ರುದ್ರಭೂಮಿ ಮೂಲಸೌಕರ್ಯ
ನಗರದ ವಿಲ್ಸನ್‌ಗಾರ್ಡನ್‌ ರುದ್ರಭೂಮಿಗೆ ಮೂಲಸೌಕರ್ಯ ಕಲ್ಪಿಸಲು 1.20 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯು ಯೋಜನೆ ರೂಪಿಸಿದೆ. ಈಗಾಗಲೆ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಂಡಿದ್ದು, 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಇತರೆ ಚಿತಾಗಾರ ಗಳಲ್ಲಿ ಹೊಸ ಚಿಮಣಿ ಅಳವಡಿಕೆ ಸೇರಿ ಇನ್ನಿತರ ಕೆಲಸಗಳಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸ ಲಾಗುತ್ತಿದ್ದು, ಸರ್ಕಾರದಿಂದ ಅನು ಮೋದನೆ ದೊರೆತ ಕೂಡಲೇ ಕಾಮಗಾರಿ  ಗಳು ಆರಂಭವಾಗಲಿವೆ. ಕಲ್ಪಳ್ಳಿ, ಚಾಮರಾಜಪೇಟೆ ಮತ್ತು ಬನಶಂಕರಿ ರುದ್ರ ಭೂಮಿಗಳಲ್ಲಿ ಹೊಸದಾಗಿ ವಿದ್ಯುತ್‌ ಚಿತಾಗಾರ ಸ್ಥಾಪನೆ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ. 

Advertisement

ಆಗಸ್ಟ್‌ ವೇಳೆಗೆ ಚರ್ಚ್‌ ಸ್ಟ್ರೀಟ್‌ ಕಾಮಗಾರಿ ಪೂರ್ಣ
ಬೆಂಗಳೂರು:
ಚರ್ಚ್‌ ಸ್ಟ್ರೀಟ್‌ ನಡೆಯು ತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿ ಆಗಸ್ಟ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.
ಗುರುವಾರ ಕಾಮಗಾರಿ ಪರಿಶೀಲಿಸಿದ ಅವರು, “ಒಟ್ಟು 715 ಮೀಟರ್‌ ಉದ್ದದ ರಸ್ತೆಯ ಕಾಮಗಾರಿ ಆಗಸ್ಟ್‌ ವೇಳೆಗೆ ಪೂರ್ಣಗೊಳ್ಳಲಿದೆ. ಈ ರಸ್ತೆಯಲ್ಲಿ ವಿಶೇಷ ವಾದ ಗ್ರಾನೈಟ್‌ ಕೇಬಲ್‌ ಸ್ಟೋನ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದು ನಗರಕ್ಕೆ  ಮಾದರಿ ರಸ್ತೆಯಾಗಲಿದೆ,’ ಎಂದರು. 

ಕಾಮಗಾರಿ ಆರಂಭವಾಗಿ ಎರಡು ತಿಂಗಳು ಕಳೆದರೂ ಶೀಘ್ರವಾಗಿ ಕಾಮ  ಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಮೇರಯ್‌ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ವಿಳಂಬವಾಗಿರುವುದ ರಿಂ­ದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿ ದರು. ಈ ವೇಳೆ ಅಧಿಕಾರಿಗಳು ರಸ್ತೆಯಲ್ಲಿ ದಟ್ಟಣೆಯಿ ರುವುದರಿಂದ ಕಾಮಗಾರಿ ತ್ವರಿತವಾಗಿ ಪೂರ್ಣ­ಗೊಳಿ­ಸಲು ಸಾಧ್ಯವಾ­ಗುತ್ತಿಲ್ಲ ಎಂದು ಮಾಹಿತಿ ನೀಡಿದರು. 

ಅದಕ್ಕೆ ಸ್ಪಂದಿಸಿದ ಮೇಯರ್‌, “ಕಾಮಗಾರಿ ಪೂರ್ಣವಾಗುವವರೆಗೆ ವಾಹನ ಸಂಚಾರ ನಿಲ್ಲಿಸಲು ಸಂಚಾರಿ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸ ಲಾಗುವುದು,’ ಎಂದು ತಿಳಿಸಿದರು. ಜಲಮಂಡಳಿ ಮತ್ತು ಬೆಸ್ಕಾಂನ ಸಂಪರ್ಕ ಗಳನ್ನು ಬದಲಾವಣೆ ಕಾರ್ಯವನ್ನು ತ್ವರಿತಗೊಳಿಸುವ ಸಂಬಂಧ ಅಧಿಕಾರಿಗ­ಳೊಂದಿಗೆ ಚರ್ಚಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next