Advertisement

Box Office: ದೀಪಾವಳಿಗೆ ರಿಲೀಸ್‌ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?

05:49 PM Nov 09, 2024 | Team Udayavani |

ದೇಶಾದ್ಯಂತ ಸಂಭ್ರಮದ ದೀಪಾವಳಿ ಹಬ್ಬ ಕಳೆದಿದೆ. ಪ್ರತಿ ಮನೆಯಲ್ಲಿ ಬೆಳಕಿನ ಹಣತೆಗಳು ಬೆಳಗಿದಂತೆ ಈ ವರ್ಷ ಥಿಯೇಟರ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಸಾಲು, ಸಾಲು ಸಿನಿಮಾಗಳು ತೆರೆಕಂಡಿದೆ.

Advertisement

ಹಬ್ಬ ಮುಗಿದು ವಾರ ಕಳೆದಿದೆ. ರಜಾ ದಿನಗಳಲ್ಲಿ ತೆರಕಂಡ ಸಿನಿಮಾಗಳು ನಿಧಾನವಾಗಿ ಗಳಿಕೆಯಲ್ಲಿ ಹಿಂದೆ ಬೀಳುತ್ತಿದೆ. ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಸೇರಿ ಒಟ್ಟು 8 ಸಿನಿಮಾಗಳು ಈ ಬಾರಿಯ ದೀಪಾವಳಿ ಹಬ್ಬಕ್ಕೆ ತೆರೆಕಂಡಿದೆ.

ಯಾವ ಸಿನಿಮಾ ಎಷ್ಟು ಗಳಿಸಿತು. ಯಾವ ಸಿನಿಮಾಕ್ಕೆ ಯಾವ ರೀತಿಯ ರೆಸ್ಪಾನ್ಸ್‌ ಕೇಳಿ ಬಂತು. ಎಷ್ಟು ಸಿನಿಮಾ ಹಿಟ್‌ ಆಯಿತು, ಸೋತಿತು ಎನ್ನುವುದರ ಕುರಿತ ಒಂದು ವರದಿ ಇಲ್ಲಿದೆ.

ಅಮರನ್:‌ ರಿಲೀಸ್‌ ಆದ 8 ಸಿನಿಮಾಗಳ ಪೈಕಿ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾವೆಂದರೆ ಶಿವಕಾರ್ತಿಕೇಯನ್ (Sivakarthikeyan) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯ ಭೂಮಿಕೆಯ ʼಅಮರನ್‌ʼ(Amaran)

Advertisement

ಮೇಜರ್‌ ಮುಕುಂದನ್‌ ಜೀವನದ ಸಾಹಸ ಕಥೆಯೊಂದಿಗೆ ಬಂದಿರುವ ಈ ಸಿನಿಮಾ ಈಗಾಗಲೇ 2024ರಲ್ಲಿ ಬಂದಿರುವ ಕಾಲಿವುಡ್‌ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾದಲ್ಲಿ 2ನೇ ಸ್ಥಾನದಲ್ಲಿದೆ.

ರಿಲೀಸ್‌ ಆದ ಹತ್ತೇ ದಿನದಲ್ಲಿ ಸಿನಿಮಾ ವರ್ಲ್ಡ್‌ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ಕಂಡಿದೆ. 100 ಕೋಟಿ ಭಾರತದಲ್ಲಿ 100 ಕೋಟಿ ವಿದೇಶದಲ್ಲಿ ಗಳಿಸಿದೆ.  ಆ ಮೂಲಕ ಈ ವರ್ಷ ಬಿಗೆಸ್ಟ್‌ ದೀಪಾವಳಿ ವಿನ್ನರ್‌ ಆಗಿ ʼಅಮರನ್‌ʼ ಸಿನಿಮಾ ಹೊರಹೊಮ್ಮಿದೆ.

ಭೂಲ್ ಭುಲೈಯಾ 3 (Bhool Bhulaiyaa 3): ಈ ವರ್ಷ ದೀಪಾವಳಿ ಹಬ್ಬಕ್ಕೆ ಬಾಲಿವುಡ್‌ನಿಂದ ಎರಡು ಸಿನಿಮಾಗಳು ರಿಲೀಸ್‌ ಆಗಿದೆ. ಅದರಲ್ಲೊಂದು ಕಾರ್ತಿಕ್‌ ಆರ್ಯನ್‌ (Kartik Aaryan)  ಅವರ ʼಭೂಲ್ ಭುಲೈಯಾ-2ʼ.

ಕಾಮಿಡಿ ಪ್ಲಸ್‌ ಹಾರಾರ್‌ ಸ್ಟೋರಿಗೆ ಬಿಟೌನ್‌ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಇದುವರೆಗೆ ಭಾರತದಲ್ಲಿ ಸಿನಿಮಾ 167 ಕೋಟಿ ರೂ.ಗಳಿಕೆ ಕಂಡಿದೆ. ವರ್ಲ್ಡ್‌ ವೈಡ್‌ ಸಿನಿಮಾ 300 ಕೋಟಿ ರೂ. ಗಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡುಗರಿಂದ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿದೆ. ಆ ನಿಟ್ಟಿನಲ್ಲಿ ಕಾರ್ತಿಕ್‌ ಆರ್ಯನ್‌ ಹಾರರ್‌ ಸ್ಟೋರಿಯೊಂದಿಗೆ ಮತ್ತೊಮ್ಮೆ ಕಮಾಲ್‌ ಮಾಡಿದ್ದಾರೆ.

ಲಕ್ಕಿ ಭಾಸ್ಕರ್‌ʼ (Lucky Baskhar):

ಟಾಲಿವುಡ್‌ನಲ್ಲಿ ʼಸೀತಾ ರಾಮಂʼ ಮೂಲಕ ಮಿಂಚಿದ ಮಾಲಿವುಡ್‌ ಸ್ಟಾರ್ ದುಲ್ಖರ್‌ ಸಲ್ಮಾನ್(Dulquer Salmaan)‌ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ʼಲಕ್ಕಿ ಭಾಸ್ಕರ್‌ʼ ಸಿನಿಮಾದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

80ರ ಕಾಲಘಟ್ಟದಲ್ಲಿ ಬ್ಯಾಂಕ್‌ ಉದ್ಯೋಗಿಯೊಬ್ಬನ ಜೀವನದ ಆರ್ಥಿಕ ಸ್ಥಿತಿಯ ಸುತ್ತ ಈ ಸಿನಿಮಾ ಟಾಲಿವುಡ್‌ ಮಂದಿ ಹಾಗೂ ಮಾಲಿವುಡ್‌ನಲ್ಲಿ ಕಮಾಲ್‌ ಮಾಡಿದೆ.

9 ದಿನದಲ್ಲಿ ಭಾರತದಲ್ಲಿ ದುಲ್ಕರ್‌ ಸಿನಿಮಾ 43.60 ಕೋಟಿ ಗಳಿಸಿದ್ದು, ವರ್ಲ್ಡ್‌ ವೈಡ್ 66 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆಯನ್ನು ಕಂಡಿದೆ.

ಕ (Ka): ಟೈಮ್‌ ಟ್ರಾವೆಲ್‌ ಥ್ರಿಲ್ಲರ್‌ ಕಥೆಯನ್ನೊಳಗೊಂಡಿರುವ ʼಕʼ ಐದು ಭಾಷೆಯಲ್ಲಿ ರಿಲೀಸ್‌ ಆಗಿದೆ. ಕಿರಣ್ ಅಬ್ಬಾವರಂ (Kiran Abbavaram) ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 18.95 ಕೋಟಿ ರೂ. ಕಲೆಕ್ಷನ್‌ ಇದುವರೆಗೆ ಮಾಡಿದೆ. ಸ್ಥಳೀಯವಾಗಿ ಸಿನಿಮಾದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 30 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಸಿನಿಮಾ ಮಾಡಲಿದೆ ಎನ್ನಲಾಗಿದೆ.

ʼಸಿಂಗಂ ಎಗೇನ್‌ʼ (Singham Again): ರಾಮಾಯಣದ ಕಥೆಯ ಹಿನ್ನೆಲೆಯನ್ನಿಟುಕೊಂಡು ಬಂದಿರುವ ರೋಹಿತ್‌ ಶೆಟ್ಟಿ(Rohit Shetty) – ಅಜಯ್‌ ದೇವಗನ್‌ (Ajay Devgn) ಅವರ ʼಸಿಂಗಂ ಎಗೇನ್‌ʼ ಸಿನಿಮಾ ಭರ್ಜರಿ ಮಾಸ್‌ ದೃಶ್ಯಗಳಿಂದ ಸದ್ದು ಮಾಡಿದೆ.

ಮಲ್ಟಿಸ್ಟಾರ್ಸ್‌ ʼಸಿಂಗಂ ಎಗೇನ್‌ʼ ಗೆ ʼಭೂಲ್ ಭುಲೈಯಾ-2ʼ  ಸಖತ್‌ ಪೈಪೋಟಿ ನೀಡಿದೆ. ಇದುವರೆಗೆ ವರ್ಲ್ಡ್‌ ವೈಡ್‌ ಈ ಸಿನಿಮಾ 275 ಕೋಟಿ ರೂ. ಗಳಿಸಿದೆ. ಶೀಘ್ರದಲ್ಲೇ ಸಿನಿಮಾ 300 ಕೋಟಿ ಗಡಿ ದಾಟುವ ಸಾಧ್ಯತೆಯಿದೆ.

“ಬಘೀರʼ: ರೋರಿಂಗ್‌ ಸ್ಟಾರ್‌ ಶ್ರೀಮುರಳಿ (Sri Murali) ಸ್ಟ್ರಾಂಗ್‌ ಆಗಿಯೇ ʼಬಘೀರʼ (Bagheera) ದ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ನಿಧಾನವಾಗಿ ಬಾಕ್ಸ್‌ ಆಫೀಸ್‌ ಆರಂಭ ಪಡೆದುಕೊಂಡ ʼಬಘೀರʼ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡ ಬಳಿಕ ಎಲ್ಲೆಡೆ ಸಖತ್‌ ಸದ್ದು ಮಾಡುತ್ತಿದೆ. ʼಮಾರ್ಟಿನ್‌ʼ ಸೋಲಿನ ಬಳಿಕ ಕನ್ನಡ ಇಂಡಸ್ಟ್ರಿಗೆ ʼಬಘೀರʼ ಬಲ ತುಂಬಿದ್ದಾನೆ.

ವರದಿಗಳ ಪ್ರಕಾರ ವರ್ಲ್ಡ್‌ ವೈಡ್‌ ʼಬಘೀರʼ 22 ಕೋಟಿ ರೂ.ಗಳಿಸಿದೆ.

ಬ್ಲಡಿ ಬೆಗ್ಗರ್ (Bloody Beggar): ನಟ ಕೆವಿನ್‌ (Kavin) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಒಂದು ಭಿಕ್ಷುಕನ ಸುತ್ತ ನಡೆಯುವ ವಿವಿಧ ಘಟನೆಗಳನ್ನು ಹೇಳುತ್ತದೆ. ಆರಂಭದಲ್ಲಿ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡ ʼಬ್ಲಡಿ ಬೆಗ್ಗರ್‌ʼ ಆ ನಂತರ ಥಿಯೇಟರ್‌ಗೆ ಜನ ಬಾರದೆ ನೀರಾಸ ಪ್ರದರ್ಶನ ಕಂಡಿತು. 8 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದ್ದು, 10 ಕೋಟಿ ಗಳಿಸಲು ಪರದಾಡುತ್ತಿದೆ.

ಬ್ರದರ್:‌ ಜಯಂರವಿ (Jayam Ravi) ಪ್ರಧಾನ ಪಾತ್ರದಲ್ಲಿರುವ ʼಬ್ರದರ್‌ʼ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರವನ್ನು ಒಳಗೊಂಡಿದೆ. ಆದರೆ ಸಿನಿಮಾಕ್ಕೆ ಭಾರೀ ನಿರಾಸದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ ಸಿನಿಮಾ ಕೇವಲ 8.81 ಕೋಟಿ ರೂ. ಗಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next