Advertisement

Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ

12:11 PM Nov 28, 2024 | Team Udayavani |

ಯಾವುದೇ ಸಿನಿಮಾ ಇರಲಿ, ಅದರ ತಯಾರಿ, ಚಿತ್ರೀಕರಣ ಕೊನೆಗೆ ಬಿಡುಗಡೆಯವರೆಗೆ ವರ್ಷಗಳ ಸಮಯ ಹಿಡಿಯುತ್ತದೆ. ಈ ಅವಧಿಯಲ್ಲಿ ಕಲಾವಿದರಿಗೆ ಆವಿಸ್ಮರಣೀಯ ಅನುಭವ ನೀಡುತ್ತದೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ಇದೇ ರೀತಿಯ ಅನುಭವ ಹೊಂದಿದ್ದಾರೆ.

Advertisement

ಇತ್ತೀಚೆಗೆ ಪುಷ್ಪ 2 ಚಿತ್ರದ ಶೂಟಿಂಗ್‌ ಪೂರ್ಣ ಗೊಂಡು, ಡಿಸೆಂಬರ್‌ 5ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಗಾಗಿ ರಶ್ಮಿಕಾ, ಪುಷ್ಪ ಬಗೆಗಿನ ತಮ್ಮ ವಿಶೇಷ ಅನುಭವವನ್ನು ಇನಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ. ಜೊತೆಗೆ ಪುಷ್ಪ 3 ಬಗ್ಗೆ ಸಣ್ಣ ಸುಳಿವನ್ನೂ ನೀಡಿದ್ದಾರೆ.

“ಇದು ನನಗೆ ಅತ್ಯಂತ ಸಂತಸದ ದಿನ. ಪುಷ್ಪ 2 ಚಿತ್ರೀಕರಣದ ಕೊನೆ ದಿನದಂದು ಅದ್ಭುತ ಹಾಡೊಂದನ್ನು ಚಿತ್ರೀಕರಿಸಿದ್ದೇವೆ. ಇದು ಕೊನೆ ದಿನ ಎಂದೆನಿಸಲೇ ಇಲ್ಲ. ನನ್ನ 7-8 ವರ್ಷಗಳ ಸಿನಿ ಪಯಣದಲ್ಲಿ 5 ವರ್ಷ ಪುಷ್ಪ ಸೆಟ್‌ನಲ್ಲೇ ಕಳೆದಿದ್ದೇನೆ. ಇದು ನನಗೆ ಮನೆಯಂತಾಗಿದೆ. ಪುಷ್ಪ 3 ಕೆಲಸಗಳು ಬಾಕಿ ಇವೆ. ಒಂದು ಅಂತ್ಯದ ಭಾವ ಇದಾಗಿದೆ. ಅರ್ಥವಾಗದ ಭಾವನೆ, ದುಃಖಗಳು ಆವರಿಸಿಕೊಂಡಿವೆ. ಅಲ್ಲು ಅರ್ಜುನ್‌, ಸುಕುಮಾರ್‌ ಹಾಗೂ ಇಡೀ ಚಿತ್ರತಂಡ ನನ್ನನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರು. ಇಂಥ ವಿಶೇಷ ವ್ಯಕ್ತಿಗಳ ಜೊತೆ ಕೆಲಸ ಮಾಡುತ್ತ ಅವರಿಗೆ ಆಪ್ತವಾಗಿದ್ದೇನೆ. ಕಳೆದ 5 ವರ್ಷಗಳಿಂದ ಪುಷ್ಪ ಸೆಟ್‌ ನನ್ನ ಮನೆಯಾಗಿದ್ದು, ಈಗ ಇದನ್ನು ತೊರೆಯುತ್ತಿರುವುದು ವಿಷಾದವಾಗಿದೆ’ ಎಂದು ರಶ್ಮಿಕಾ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next