Advertisement

ಸ್ಫೂರ್ತಿ –ಅದು ನಿರಂತರ ಬೆಳೆಯುವ ಭತ್ತವಿದ್ದಂತೆ

03:21 AM Jun 01, 2020 | Hari Prasad |

ಸ್ಫೂರ್ತಿ ಎಂಬುದು ಯಾರಿಂದಲೂ ಕಬಳಿಸುವ ವಿಚಾರವಲ್ಲ.

Advertisement

ಅದು ಪಂಚೇಂದ್ರಿಯಗಳಾದಿಯಾಗಿ ಮೆದುಳನ್ನು ಮನಮುಟ್ಟುವಂತೆ ಮನವರಿಕೆ ಮಾಡುವ ಶಕ್ತಿಯುತ ಶೇಷ್ಠ ಸಂದೇಶ.

ಅಪ್ರತಿಮ ಸಾಧಕೋತ್ತಮರು ವ್ಯವಸ್ಥೆಯೇ ಬೆರಗಾಗುವ ಉತ್ತಮ ವಿಷಯದಿಂದ ಸ್ಫೂರ್ತಿ ಹೊಂದಿ ಲೋಕ ಪ್ರಚಲಿತರಾದವರು. ಸಾಮಾನ್ಯನನ್ನು ಅಪ್ರತಿಮ ಸಾಧಕನನ್ನಾಗಿಸುವ ಪ್ರೇರಣಾ ಶಕ್ತಿಯೇ ಸ್ಫೂರ್ತಿ.

‘ಛಲಬೇಕು ಶರಣಂಗೆ ಗೆಲ್ಲುವ ಛಲಬೇಕು’ ಎಂಬ ನಾಣ್ನುಡಿಯಂತೆ ಶಿವ ಕೃಪೆಗೆ ಪಾತ್ರರಾದ ತಪಸ್ವಿಗಳ ಸ್ಫೂರ್ತಿಯ ತಳಹದಿಯ ಮೇಲೆ ನಿರ್ಮಿಸಿದ ಶಕ್ತಿಯುತ ಮಂದಿರವಿದ್ದಂತೆ. ಛಲವೆಂಬ ಆರೋಗ್ಯವಂತ ಮಗುವಿನ ಸದೃಢ ಬೆಳವಣಿಗೆಗೆ ಸ್ಫೂರ್ತಿಎಂಬುದು ತಾಯಿಯ ಎದೆಹಾಲು ಇದ್ದಂತೆ. ಸ್ಫೂರ್ತಿಎಂಬ ಪದದ ಬಳಕೆ ಕಡಿಮೆ ಯಾದರೂ ಅನುಕರಣೆಯೇ ಹೆಚ್ಚು.

ದೊಡ್ಡ ದೊಡ್ಡ ಕವಿತೆ ಕಾದಂಬರಿಗಳನ್ನು ಪುಟಗಟ್ಟಲೆ ಬರೆದ ಗ್ರಂಥ ನಿರ್ಮಿಸಿ ಜ್ಞಾನಪೀಠವನ್ನು ಅಲಂಕರಿಸಿದ ಕವಿ ಗಣ್ಯರ ಲೋಕ ಪ್ರೀತಿಗೆ ಸಣ್ಣ ಸಣ್ಣ ವಿಚಾರಗಳೇ ಸ್ಫೂರ್ತಿ ಎಂಬುದು ಸತ್ಯ. ಹಲವು ಕ್ಷೇತ್ರಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ ಅಂಗವಿಕಲರನ್ನು, ಕೆಲವು ಭಾರತೀಯರು ಸ್ಫೂರ್ತಿಯಾಗಿಟ್ಟು ಕೊಂಡರೆ ಭಾರತದ ಭವಿಷ್ಯ ವಿಶ್ವಕ್ಕೆ ಸ್ಫೂರ್ತಿ.

Advertisement

ಕನ್ನಡ ಪ್ರೀತಿಗೆ ಡಾ| ರಾಜಕುಮಾರ್‌ಅವರು ಸ್ಫೂರ್ತಿಯಾದರೆ ಭಾರತ ಪ್ರೀತಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ. ಸೇವೆಗೆ ಮದರ್‌ ತೆರೇಸಾ ಸ್ಫೂರ್ತಿಯಾದರೆ ಅಕ್ಷರ ದಾಸೋಹಕ್ಕೆ ಸಿದ್ದಗಂಗೆಯ ಶ್ರೀಗಳೇ ಸ್ಫೂರ್ತಿ.

ಸ್ಫೂರ್ತಿಯು ಹಳಸಿ ಹೋಗುವ ಅನ್ನವಲ್ಲ ಅದು ನಿರಂತರ ಬೆಳೆಯುವ ಭತ್ತವಿದ್ದಂತೆ. ಕೊಳೆತು ಕೆಟ್ಟುಹೋದ ಹಣ್ಣಿನ ಬೀಜದಿಂದ ಬೃಹದಾಕಾರ ವೃಕ್ಷ ಬೆಳೆದು ಸಿಹಿ ಹಣ್ಣಿನೊಂದಿಗೆ ನೆರಳಿನ ತಂಪೆರೆಯುವ ಶಕ್ತಿ ಸ್ಫೂರ್ತಿ.

ಶಿಸ್ತಿನ ಬದ್ಧತೆಯಿಂದ ಹಲವು ಕ್ಷೇತ್ರಗಳಲ್ಲಿ ಸಾಧನೆ ಶಿಖರವೇರಿದ ಅಸಾಮಾನ್ಯರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾವು ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸುಂದರ ಬಾಳು ಬಾಳೋಣ. ಬೇರೊಬ್ಬರ ಸಜ್ಜನಿಕೆಯ ಬದುಕಿಗೆ ಸ್ಫೂರ್ತಿಯಾದವನೇ ನಿಜವಾದ ಮನುಷ್ಯ. ಸಾಧ್ಯವಾದರೆ ನಾವೆಲ್ಲರೂ ಸ್ಫೂರ್ತಿಯ ಮನುಜರಾಗೋಣ.


– ಭರತ್‌ ಸಿ., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next