Advertisement

ನೀರು ಪೂರೈಕೆಗೆ ಒತ್ತಾಯ

07:53 AM May 28, 2020 | mahesh |

ಕಾರಟಗಿ: ಪಟ್ಟಣದ 20ನೇ ವಾರ್ಡ್‌ನಲ್ಲಿ 15 ದಿನಗಳಿಂದ ನೀರು ಪೂರೈಸಿಲ್ಲ ಎಂದು ಆರೋಪಿಸಿ ವಾರ್ಡ್‌ ನಿವಾಸಿಗಳು ಕಿರು ನೀರಿನ ತೊಟ್ಟಿಯ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ವಾರ್ಡ್‌ ನಿವಾಸಿಗಳಾದ ರಂಗಮ್ಮ ಬೂದಿ, ಮಂಜುಳಾ ಮಾತನಾಡಿ, ಪಟ್ಟಣದ 20ನೇ ವಾರ್ಡ್‌ನಲ್ಲಿ 15 ದಿನಗಳಿಂದ ನೀರು ಪೂರೈಸಿಲ್ಲ. ಕಿರು ನೀರಿನ ತೊಟ್ಟಿ ನಿರ್ಮಿಸಿ ಒಂದು ವರ್ಷ ಗತಿಸಿದೆ. ಆದರೂ ಇದುವರೆಗೂ ತೊಟ್ಟಿಗೆ ನೀರು ತುಂಬಿಸಿಲ್ಲ.

Advertisement

ಪುರಸಭೆ ಸಿಬ್ಬಂದಿಗಳು ಸಮಸ್ಯೆಗಳ ಬಗ್ಗೆ ಹೇಳಿದರೆ ಗಮನಹರಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಪುರಸಭೆ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ವಾರ್ಡ್‌ ನಿವಾಸಿಗಳು ಎಚ್ಚರಿಸಿದರು. ಪಟ್ಟಣದ ಜೆಪಿ ನಗರದಲ್ಲಿ ನೀರು ಪೂರೈಕೆಯ ಪೈಪ್‌ಗ್ಳಲ್ಲಿ ಬೇರುಗಳು ಅಡ್ಡ ಬಂದ ಪರಿಣಾಮ ಸರಳವಾಗಿ ನೀರು ಪೂರೈಕೆಯಾಗುತ್ತಿಲ್ಲ. ಅದನ್ನು ಸರಿಪಡಿಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾ ಧಿಕಾರಿ ಎನ್‌. ಶಿವಲಿಂಗಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next