Advertisement

ಕೃಷಿ ವಿವಿಗೆ ದೇವೇಗೌಡ ಹೆಸರಿಡಲು ಒತ್ತಾಯ

12:44 PM Nov 03, 2017 | Team Udayavani |

ಬೆಂಗಳೂರು: ರಾಜ್ಯದ ಯಾವುದಾದರು ಒಂದು ಕೃಷಿ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರ ಹೆಸರನ್ನಿಡಬೇಕು ಎಂದು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಮುಖ್ಯಮಂತ್ರಿಯಾಗಿ,ದೇಶದ ಪ್ರಧಾನಿಯಾಗಿ ದೇವೇಗೌಡ ಅವರು, ಕೃಷಿ ಹಾಗೂ ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಮಹಾನ್‌ ಮುತ್ಸದ್ಧಿಯ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ್ದು, ಈ ಹಿನ್ನಲೆಯಲ್ಲಿ ರಾಜ್ಯದ ಯಾವುದಾದರು ಒಂದು ಕೃಷಿ ವಿಶ್ವವಿದ್ಯಾಲಯಕ್ಕೆ ದೇವೇಗೌಡ ಅವರ ಹೆಸರನ್ನಿಡ‌ಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗ ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಅವರ ನೆರವಿಗೆ ದಾವಿಸಿ ಸಲಹೆ ಸೂಚನೆಗಳನ್ನು ನೀಡಿದರು.ಇದೊಂದೆ ವಿಚಾರ ಅಲ್ಲ, ರಾಜ್ಯದ ಯಾವುದೇ ನೀರಾವರಿ ವಿಚಾರಗಳಲ್ಲಿ ರೈತರಿಗೆ ಅನ್ಯಾಯವಾದಗ ಬೀದಿಗಿಳಿದು ಪ್ರತಿಭಟಿಸುವ ಕಾಯಕ ದೇವೇಗೌಡರದ್ದಾಗಿದೆ. ಅವರೊಬ್ಬ ಹುಟ್ಟು ಹೋರಾಟಗಾರ ಎಂದು ಬಣ್ಣಿಸಿದರು. 

ಕಲ್ಪತರು ನಾಡಿನಲ್ಲಿ ನಡೆದಿರುವ ಹಲವು ನೀರಾವರಿ ಹೋರಾಟದಲ್ಲಿ ದೇವೇಗೌಡ ಅವರು ಪಾಲ್ಗೊಂಡಿದ್ದಾರೆ. ಅಲ್ಲದೆ ಯೋಜನೆಗಳ ಜಾರಿಯಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ತಮಕೂರು ವಿಶ್ವವಿದ್ಯಾಲಯ ಮಾಜಿ ಪ್ರಧಾನಿ ದೇವೇಗೌಡ ಅವರ ಹೋರಾಟವನ್ನು ಪರಿಗಣಿಸಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸುವ ಪ್ರಯತ್ನ ಮಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next