Advertisement

ರಾಜೀವ್‌ ಭ್ರಷ್ಟರಾಗಿರಲಿಲ್ಲ; ಅನಂತರ ಬೊಫೋರ್ಸ್‌ ನಲ್ಲಿ ಶಾಮೀಲಾದರು: ಸತ್ಯಪಾಲ್‌

09:50 AM May 10, 2019 | Sathish malya |

ಶ್ರೀನಗರ : ‘ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಆರಂಭದಲ್ಲಿ ಭ್ರಷ್ಟರಾಗಿರಲಿಲ್ಲ; ಆದರೆ ಅನಂತರದಲ್ಲಿ ಕೆಲವರ ಪ್ರಭಾವದಿಂದಾಗಿ ಅವರು ಬೊಫೋರ್ಸ್‌ ಭ್ರಷ್ಟಾಚಾರ ಕೇಸಿನಲ್ಲಿ ಶಾಮೀಲಾದರು’ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್‌ ಮಲಿಕ್‌ ಇಂದು ಗುರುವಾರ ಹೇಳಿದ್ದಾರೆ.

Advertisement

ಬಂಡುಕೋರ ಬಿಜೆಪಿ ನಾಯಕ ಅಜಯ್‌ ಅಗರ್‌ವಾಲ್‌ ಅವರು ಬಿಡುಗೆಗೊಳಿಸಿದ 76 ಸೆಕೆಂಡುಗಳ ಆಡಿಯೋ ಕ್ಲಿಪ್‌ ನಲ್ಲಿ ಮಲಿಕ್‌ ಅವರು ಸುಪ್ರೀಂ ಕೋರ್ಟ್‌ ವಕೀಲರಿಗೆ “ರಾಜೀವ್‌ ಗಾಂಧಿ ಭ್ರಷ್ಟರಿರಲಿಲ್ಲ’ ಎಂದು ಹೇಳಿದ್ದು ಅದರ ಮುಂದುವರಿಕೆಯಾಗಿ ಈ ಮಾತನ್ನು ಪ್ರತಿಕ್ರಿಯೆ ರೂಪದಲ್ಲಿ ಹೇಳಿದರು.

‘ಅಂದಿನ ದಿನಗಳಲ್ಲಿ ರಾಜೀವ್‌ ಗಾಂಧಿ ಅವರೊಂದಿಗೆ ಅರುಣ್‌ ನೆಹರೂ ಅವರಿಗೆ ಉತ್ತಮ ಒಡನಾಟ ಇತ್ತು. ಅವರಿಬ್ಬರೂ ಜತೆಯಾಗಿ ಹೋಗಿ ಬರುತ್ತಿದ್ದರು. ಆಗ ರಾಜೀವ್‌ ಗಾಂಧಿ ತಮ್ಮ ಪ್ರಯಾಣ ಖರ್ಚು ವೆಚ್ಚಕ್ಕೆಂದು ಎಐಸಿಸಿ ಯಿಂದ ಪಡೆಯುತ್ತಿದ್ದ ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿರಲಿಲ್ಲ. ಆಗಲೇ ಅರುಣ್‌ ನೆಹರೂ ಅವರು ರಾಜೀವ್‌ ಭ್ರಷ್ಟರಲ್ಲ ಎಂದು ನನ್ನಲ್ಲಿ ಹೇಳುತ್ತಿದ್ದರು’ ಎಂದು ಸತ್ಯಪಾಲ್‌ ಮಲಿಕ್‌ ಹೇಳಿದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರು ಭ್ರಷ್ಟಾಚಾರಿ ನಂಬರ್‌ 1 ಆಗಿದ್ದುಕೊಂಡೇ ತಮ್ಮ ಜೀವಿತವನ್ನು ಮುಗಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಚುನಾವಣಾ ರಾಲಿಯಲ್ಲಿ ಹೇಳಿದ್ದ ಮಾತು ವಿರೋದ ಪಕ್ಷಗಳ, ವಿಶೇಷವಾಗಿ ಕಾಂಗ್ರೆಸ್‌ ವಲಯದಲ್ಲಿ ವ್ಯಾಪಕ ವಿರೋದ, ಟೀಕೆ, ಖಂಡನೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next