Advertisement

RBI: ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕಾರ, ಎಲ್ಲರ ಚಿತ್ತ ಬಡ್ಡಿ ದರದತ್ತ

02:41 PM Dec 11, 2024 | Team Udayavani |

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್ ಬಿಐ) 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಬುಧವಾರ ಅಧಿಕಾರ ಸ್ವೀಕರಿಸಿದರು.

Advertisement

ಇಂದು (ಡಿ.11) ಅಧಿಕಾರ ವಹಿಸಿಕೊಂಡ ಮಲ್ಹೋತ್ರಾ ಅವರು ಮುಂದಿನ ಮೂರು ವರ್ಷಗಳ ಕಾಲ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಈ ಹಿಂದೆ ಇದ್ದ ಶಕ್ತಿಕಾಂತ ದಾಸ್ ಅವರು ಅಧಿಕಾರ ತ್ಯಜಿಸಿದ ಕಾರಣ ಅವರ ಸ್ಥಾನಕ್ಕೆ ಕಂದಾಯ ಕಾರ್ಯದರ್ಶಿ ಆಗಿದ್ದ ಎಂಆರ್ ಮಲ್ಹೋತ್ರಾ ಅವರನ್ನು ನೇಮಕ ಮಾಡಲಾಗಿದೆ.

ಇದೀಗ ಮಲ್ಹೋತ್ರಾ ಅವರು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಡ್ಡಿದರ ಇಳಿಕೆಯ ಬಗ್ಗೆ ಚರ್ಚೆಗಳು ನಡೆಯತೊಡಗಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ: ಕೃಷ್ಣ ನಿಧನ;ಪ್ರಮುಖ‌ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ

Advertisement

Udayavani is now on Telegram. Click here to join our channel and stay updated with the latest news.

Next