Advertisement

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

07:15 AM Dec 21, 2024 | Team Udayavani |

21-12-2024

Advertisement

ಮೇಷ: ನಿಗದಿತ ಕಾರ್ಯ ಮುಗಿದ ಸಮಾಧಾನ. ಉದ್ಯಮಗಳ ಉತ್ಪನ್ನಗಳ ಪ್ರಚಾರದಲ್ಲಿ ಮೇಲಾಟ. ಮೆಕ್ಯಾನಿಕಲ್‌ ವೃತ್ತಿಯವರಿಗೆ ಒಳ್ಳೆಯ ಆದಾಯ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ. ವಿವಾಹ ಮಾತುಕತೆಗಾಗಿ ದೂರ ಪ್ರಯಾಣ.

ವೃಷಭ: ಉದ್ಯೋಗಸ್ಥರಿಗೆ ಒಂದು ಬಗೆಯ ನಿರುತ್ಸಾಹ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ಸೋಲು.

ಮಿಥುನ: ಮಧ್ಯಮ ಮಾರ್ಗದಲ್ಲಿ ಸಾಗಿದರೆ ಕಡಿಮೆ ನಷ್ಟ. ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ರಜೆಯ ಸದುಪಯೋಗಕ್ಕೆ ಮಕ್ಕಳಿಗೆ ಮಾರ್ಗದರ್ಶನ.

ಕರ್ಕಾಟಕ: ಉದ್ಯಮದ ಉತ್ಪಾದನೆಗಳಿಗೆ ಅಧಿಕ ಬೇಡಿಕೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ಹಳೆಯ ಸಾಲ ವಸೂಲಿಯಾಗಿ ನೆಮ್ಮದಿ. ಸಂಸಾರ ಸಹಿತ ಶಿವಾಲಯಕ್ಕೆ ಭೇಟಿ. ಮನೆಯಲ್ಲಿ ನೆಮ್ಮದಿ.

Advertisement

ಸಿಂಹ: ವ್ಯವಹಾರಸ್ಥರಿಗೆ ಮತ್ತು ಉದ್ಯೋಗಸ್ಥರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರ್‌ರಿಗೆ ಕಾರ್ಮಿಕರ ಸಮಸ್ಯೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಕನ್ಯಾ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ. ಉದ್ಯೋಗಾಸಕ್ತರಿಗೆ ಅಯಾಚಿತ ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಪತ್ನಿಯ ಕಡೆಯಲ್ಲಿ ವಿವಾಹ ಮಾತುಕತೆ.

ತುಲಾ: ಸಕಾಲದಲ್ಲಿ ಪರಿಹಾರಗೊಂಡ ಸಮಸ್ಯೆಗಳು. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಲದೇವರ ದೇವಾಲಯಕ್ಕೆ ಭೇಟಿ.

ವೃಶ್ಚಿಕ: ಸಾಂಸಾರಿಕ ತಾಪತ್ರಯಗಳ ಉಪಶಮನ. ಉದ್ಯೋಗ ಸ್ಥಾನದಲ್ಲಿ ವರಿಷ್ಠರಿಗೆ ಹರ್ಷ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಧನು: ಉದ್ಯೋಗ ಸ್ಥಾನದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿ ಅಭಿವೃದ್ಧಿಗೆ ಪ್ರಯತ್ನ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ. ದಂಪತಿಗಳ ನಡುವೆ ಅನುರಾಗ ವೃದ್ಧಿ.

ಮಕರ: ಉದ್ಯೋಗ ಸ್ಥಾನಕ್ಕೆ ಹೊಸರೂಪ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೇಟರಿಂಗ್‌, ಶಾಮಿಯಾನಾ ವ್ಯವಹಾರದಲ್ಲಿ ಲಾಭ. ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವರ್ಧನೆ.

ಕುಂಭ: ಹೊಸ ಆದಾಯ ಮೂಲಗಳ ಅನ್ವೇಷಣೆ. ಸರಕಾರಿ ನೌಕರರಿಗೆ ಅನುಕೂಲ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶ ಗೋಚರ. ಮಕ್ಕಳಿಂದ ಸಂತಸ.

ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಸ್ಥಿರಬುದ್ಧಿ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಹೊಸ ಪಾಲುದಾರಿಕೆ ವ್ಯವಹಾರ ಮುನ್ನಡೆ. ಹಿರಿಯ ಬಂಧುವಿಗೆ ಆಪತ್ಕಾಲದಲ್ಲಿ ಸಹಾಯ. ಮಿತ್ರರ ಭೇಟಿಯಿಂದ ಸಂತಸ.

ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next