Advertisement

ಇನ್ಫೋಸಿಸ್‌ನಿಂದ 55 ಸಾವಿರ ಹೊಸಬರ ನೇಮಕ

09:11 PM Feb 16, 2022 | Team Udayavani |

ಮುಂಬೈ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ 2022-23ನೇ ಸಾಲಿನಲ್ಲಿ 55 ಸಾವಿರ ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ. ಹೀಗೆಂದು ಸಂಸ್ಥೆಯ ಸಿಇಒ ಸಲಿಲ್‌ ಪಾರೇಖ್‌ ಹೇಳಿದ್ದಾರೆ.

Advertisement

ಎಂಜಿನಿಯರಿಂಗ್‌ ಮತ್ತು ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಪದವೀಧರರಿಗೆ ಹೊಸ ಅವಕಾಶಗಳು ಇವೆ.

2022-23ನೇ ಸಾಲಿನಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಕ್ಯಾಂಪಸ್‌ನಿಂದ 55 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಕಂಪನಿ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಇನ್ಫೋಸಿಸ್‌ನಲ್ಲಿರುವ ಉದ್ಯೋಗಿಗಳ ಕೌಶಲ್ಯಾಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುತ್ತಿದೆ.

ಇದನ್ನೂ ಓದಿ:ಕಾನೂನು ಸುವ್ಯವಸ್ಥೆ ಭಂಗತರುವವರ ವಿರುದ್ದ ಕಠಿಣ ಕ್ರಮ : ಎಸ್.ಪಿ.ಚೇತನ್ ಎಚ್ಚರಿಕೆ

Advertisement

ರಾಷ್ಟ್ರೀಯ ಸಾಫ್ಟ್ವೇರ್‌ ಸೇವಾ ಕಂಪನಿಗಳ ಒಕ್ಕೂಟ (ನ್ಯಾಸ್ಕಾಂ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕಂಪನಿ ತನ್ನ ವಾರ್ಷಿಕ ಆದಾಯದಲ್ಲಿ ಶೇ.20 ಜಿಗಿತ ಸಾಧಿಸಲು ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಹೊಸಬರು ಕಂಪನಿಗೆ ಸೇರಿದಾಗ ಬೆಳವಣಿಗೆ ಸಾಧಿಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next