Advertisement

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

09:45 PM Jan 02, 2025 | Team Udayavani |

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್‌ ಪಾಂಚಾಳ ಕುಟುಂಬಕ್ಕೆ ಹೆಚ್ಚುವರಿ ನೆರವು ಹಾಗೂ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

Advertisement

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿನ್‌ ಸಾವು ದುಃಖದಾಯಕ. ಅವರು ನನ್ನ ಮತಕ್ಷೇತ್ರದವರಾಗಿದ್ದು, ಈ ದುರ್ಘ‌ಟನೆಯ ಬಳಿಕ ಅವರ ಕುಟುಂದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರಿಗೆ ಐವರು ಸಹೋದರಿಯರಿದ್ದು, ಯಾರಾದರೂ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸಿಎಂ ಗಮನ ಸೆಳೆಯುತ್ತೇನೆ ಎಂದರು.

ಅವರ ಕುಟುಂಬಸ್ಥರನ್ನು ಭೇಟಿ ಮಾಡಿದಾಗ ಸ್ವತಂತ್ರ ತನಿಖೆಯ ಭರವಸೆಯನ್ನೂ ಕೊಟ್ಟಿದ್ದೆ. ಅದರಂತೆ ಸಿಐಡಿ ತನಿಖೆಗೆ ಪ್ರಕರಣವನ್ನು ವಹಿಸಿದ್ದೇವೆ. ತನಿಖೆ ಈಗಷ್ಟೇ ಆರಂಭವಾಗಿದೆ. ನಿಷ್ಪಕ್ಷಪಾತವಾಗಿಯೂ ನಡೆಯುತ್ತಿದೆ ಎಂದರು.

ಡೆತ್‌ನೋಟ್‌ನಲ್ಲಿ ಪ್ರಿಯಾಂಕ್‌ ಹೆಸರಿಲ್ಲ :
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ವಿರುದ್ಧ ಮಾತನಾಡಲು ಬಿಜೆಪಿಯವರಿಗೆ ಯಾವುದೇ ವಿಚಾರ ಇಲ್ಲ. ಹೀಗಾಗಿ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧವೂ ಹೊಟ್ಟೆಯುರಿಯಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ನಾಳೆ ಬೃಹತ್‌ ಹೋರಾಟ
ಸಚಿವ ಪ್ರಿಯಾಂಕ ಖರ್ಗೆ ಹೆಸರು ಸಚಿನ್‌ ಅವರ ಡೆತ್‌ನೋಟ್‌ನಲ್ಲಿದೆ. ಅವರ ಆಪ್ತನೇ ಈ ಘಟನೆಗೆ ಕಾರಣ. ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಸಿಂಎ ರಾಜೀನಾಮೆ ಪಡೆಯಲು ಗಡಗಡ ನಡಗುತ್ತಿದ್ದಾರೆ. ಇದರೊಂದು ಕೊಲೆಗಡುಕು ಸರ್ಕಾರ. ಇದರ ವಿರುದ್ಧ ಜ.4 ರಂದು ಕಲಬುರಗಿಯಲ್ಲಿ ಬಿಜೆಪಿ ವತಿಯಿಂದ ಬೃಹತ್‌ ಹೋರಾಟ ನಡೆಯಲಿದೆ.
-ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

Advertisement

ಪ್ರಿಯಾಂಕ್‌ ರಾಜೀನಾಮೆ ಯಾವಾಗ?
ನನಗೆ ಸಚಿವ ಪ್ರಿಯಾಂಕ್‌ ಖರ್ಗೆ ಕೊಟ್ಟ ನೋಟಿಸ್‌ನಲ್ಲಿ ಜೀವ ಇಲ್ಲ. ಅದೊಂದು ನಿಶ್ಶಕ್ತ ನೋಟಿಸ್‌. ಒಂದು ವರ್ಷದ ಹಿಂದೆ ಕೊಟ್ಟ ನೋಟಿಸ್‌ಗೆ ನಾನು ಒಂದು ಚೂರೂ ಅಲುಗಾಡಿಲ್ಲ (ಶೇಕ್‌ ಆಗಿಲ್ಲ). ಅವರ ನೋಟಿಸ್‌ಗೆ ಯಾವ ಪ್ರಾಮುಖ್ಯತೆಯೂ ಇಲ್ಲ, ಮೌಲ್ಯವೂ ಇಲ್ಲ. ಪ್ರಿಯಾಂಕ್‌ ಖರ್ಗೆಯವರೇ ಯಾವಾಗ ನೀವು ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುತ್ತೀರಿ, ಅಷ್ಟೇ ಹೇಳಿ.
– ಪಿ.ರಾಜೀವ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next