Advertisement
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ದಿನೇ ದಿನೆ ಶಂಕಿತ ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ 2021ರಲ್ಲಿ 131 ಶಂಕಿತ ಡೆಂಘೀ ಪ್ರಕರಣಗಳಿದ್ದವು. ಇದರಲ್ಲಿ 34 ಪ್ರಕರಣಗಳು ಖಚಿತಗೊಂಡಿದ್ದವು. ಚಿಕೂನ್ ಗುನ್ಯಾ 61 ಶಂಕಿತವಿದ್ದರೆ, 10 ಪ್ರಕರಣಗಳು ಖಚಿತವಾಗಿದ್ದವು. 2022ರ ಜೂನ್ ಅಂತ್ಯದವರೆಗೆ 445 ಶಂಕಿತ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ. ಇದರಲ್ಲಿ 50 ಪ್ರಕರಣಗಳು ಖಚಿತಗೊಂಡಿವೆ.ಚಿಕೂನ್‌ಗುನ್ಯಾ 353 ಶಂಕಿತವಿದ್ದರೆ, 9 ಪ್ರಕರಣಗಳು ಖಚಿತಗೊಂಡಿವೆ. 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಮಳೆಗಾಲ ಆರಂಭವಾದ ಜೂನ್ ಒಂದೇ ತಿಂಗಳಲ್ಲಿಯೇ 164 ಜನರಲ್ಲಿ ಡೆಂಘೀ, 158 ಜನರಲ್ಲಿ ಚಿಕೂನ್‌ಗುನ್ಯಾ ಶಂಕಿತ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ಜೂನ್ ತಿಂಗಳಲ್ಲಿಯೇ 25 ಡೆಂಘೀ, 3 ಚಿಕೂನ್‌ಗುನ್ಯಾ ಪ್ರಕರಣಗಳು ಖಚಿತಗೊಂಡಿವೆ.
Related Articles
Advertisement