Advertisement

ಕಲ್ಲಂಗಡಿ ಮಾರಾಟಕ್ಕೆ ಕೋವಿಡ್ ಕಾಟ

11:27 AM Apr 17, 2020 | Naveen |

ಇಂಡಿ: ಸರಕಾರದಿಂದ ಜಿಲ್ಲಾ ಕೇಂದ್ರದಲ್ಲಿ ತೆರೆದಿರುವ ಹಾಪ್‌ಕಾಮ್ಸ್‌ ಮಳಿಗೆಯಿಂದ ರೈತರ ಬೆಳೆ ಖರೀದಿ ಮಾಡಲಾಗುವುದು ಎಂದು ಕೃಷಿ ಸಚಿವರು, ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರೈತರು ಬೆಳೆದ ಎಲ್ಲ ಬೆಳೆಯನ್ನೂ ಹಾಪ್‌ಕಾಮ್ಸ್‌ದಿಂದ ಖರೀದಿಸಲು ಅಸಾಧ್ಯವಾಗಿದೆ.

Advertisement

ಕಲ್ಲಂಗಡಿ ಬೆಳೆದಿರುವ ತಾಲೂಕಿನ ಇಂಗಳಗಿ, ಆಳೂರ, ಲಚ್ಯಾಣ, ಇಂಡಿ, ಅಹಿರಸಂಗ, ಹಿರೇಬೇವನೂರ, ಭುಯ್ನಾರ ಗ್ರಾಮಗಳಲ್ಲಿನ ರೈತರು ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರ ಲಾಕ್‌ಡೌನ್‌ ಆದೇಶ ನೀಡಿ ಜೀವ ಉಳಿಸಲು ಗಟ್ಟಿ ನಿರ್ಧಾರ ತೆಗದುಕೊಂಡಿದ್ದು, ಈ ಸಂದರ್ಭದಲ್ಲಿ ಸಾಲಸೂಲ ಮಾಡಿ ಬೆಳೆದಿರುವ ಬೆಳೆ ಮಾರಾಟಮಾಡಲಾಗದೆ ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಧ್ಯವರ್ತಿಗಳು ಕೆಜಿ ಕಲ್ಲಂಗಡಿಗೆ ಕೇವಲ 2 ರೂಪಾಯಿ ಕೇಳುತ್ತಿದ್ದು, ಇದು ನಾವು ಬೆಳೆಗೆ ಮಾಡಿದ ಖರ್ಚು ಸಹ ಮರಳಿ ಬಾರದಂತ ಸ್ಥಿತಿಯಲ್ಲಿದೆ.

ತಾಲೂಕಿನಲ್ಲಿ ಅನೇಕ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಆದರೆ, ಲಾಕ್‌ಡೌನ್‌ ಪರಿಣಾಮ ಮಾರುಕಟ್ಟೆಗೆ ಸಾಗಾಟ ಮಾಡಲು ಸಮಸ್ಯೆಯಾಗಿದೆ. ಹಾಫ್‌ಕಾಮ್ಸ್ ಗೆ ಕಳುಹಿಸಲು ಕರೆ ಮಾಡಿ ಕೇಳಿದ್ದೇವೆ. ಈಗಾಗಲೇ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಖರೀದಿ ಮಾಡಲಾಗಿದೆ. ಸದ್ಯ ಅಗತ್ಯವಿಲ್ಲ ಎನ್ನುವ ಉತ್ತರ ನೀಡಿದ್ದಾರೆ.
ರಮೇಶ ಬೆನಕನಹಳ್ಳಿ,
ಇಂಗಳಗಿ ಗ್ರಾಮದ ರೈತ

2ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಮಾರುಕಟ್ಟೆ ಇಲ್ಲದ ಕಾರಣ ಜಮೀನಿನಲ್ಲೇ ಬೆಳೆ ಕೊಳೆಯುತ್ತಿದೆ. ದನ-ಕರುಗಳಿಗೆ ಕಲ್ಲಂಗಡಿ ತಿನ್ನಿಸುತ್ತಿದ್ದೇವೆ. ಕೆಜಿಗೆ ಎರಡು ರೂಪಾಯಿಯಂತೆ ಕೇಳುತ್ತಿದ್ದಾರೆ. ನಮ್ಮ ಗೋಳು ಕೇಳಲು ಯಾರೂ ಮುಂದೆ ಬರುತ್ತಿಲ್ಲ.
ವಿಠ್ಠಲ ಬಿರಾದಾರ,
ಆಳೂರ ಗ್ರಾಮದ ರೈತ

ತಾಲೂಕಿನಲ್ಲಿ ಬೆಳೆದಿರುವ ಕಲ್ಲಂಗಡಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಲ್ಲಂಗಡಿ , ಲಿಂಬೆ, ಕರಬೂಜ, ದ್ರಾಕ್ಷಿ, ದಾಳಿಂಬೆ ಬೆಳೆಗಳಿಗೂ ಇದೇ ಪರಿಸ್ಥಿತಿ ಇದೆ. ಸರಕಾರದ ಗಮನ ಸೆಳೆದು ರೈತರಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಯಶವಂತ್ರಾಯಗೌಡ ಪಾಟೀಲ,
ಶಾಸಕರು

Advertisement

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next