Advertisement

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

03:38 PM Oct 24, 2024 | Team Udayavani |

ಪುಣೆ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಮೇಲಗೈ ಸಾಧಿಸಿದೆ. ತಮಿಳುನಾಡು ಸ್ಪಿನ್ನರ್‌ ಗಳಾದ ವಾಷಿಂಗ್ಟನ್‌ ಸುಂದರ್‌ (Washington Sundar) ಮತ್ತು ರವಿಚಂದ್ರನ್‌ ಅಶ್ವಿನ್‌ (ravichandran Ashwin) ದಾಳಿಗೆ ಸಿಲುಕಿದ ನ್ಯೂಜಿಲ್ಯಾಂಡ್‌ ತಂಡವು 259 ರನ್‌ ಗಳಿಗೆ ಆಲೌಟಾಗಿದೆ.

Advertisement

ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಕಿವೀಸ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿತು. ಡಿವೋನ್‌ ಕಾನ್ವೆ ಮತ್ತು ರಚಿನ್‌ ರವೀಂದ್ರ ಹೊರತಾಗಿ ಉಳಿದ ಬ್ಯಾಟರ್‌ ಗಳು ಕ್ರೀಸ್‌ ಕಚ್ಚಿ ನಿಲ್ಲಲು ಕಷ್ಟ ಪಟ್ಟರು. ಕಾನ್ವೇ 76 ರನ್‌ ಗಳಿಸಿದರೆ, ಬೆಂಗಳೂರಿನಲ್ಲಿ ಶತಕ ಹೊಡೆದಿದ್ದ ರಚಿನ್‌ 65 ರನ್‌ ಗಳಿಸಿದರು.

ಎರಡನೇ ಪಂದ್ಯಕ್ಕೆ ತಂಡಕ್ಕೆ ಸೇರ್ಪಡೆಯಾದ ವಾಷಿಂಗ್ಟನ್‌ ಸುಂದರ್‌ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಸ್ಪಿನ್‌ ಟ್ರ್ಯಾಕ್‌ ನ ಭರಪೂರ ಲಾಭವೆತ್ತಿದ ವಾಷಿಂಗ್ಟನ್‌ ಏಳು ವಿಕೆಟ್‌ ಪಡೆದು ಮಿಂಚಿದರು. ಮತ್ತೊಂದೆಡೆ ಅನುಭವಿ ಸ್ಪಿನ್ನರ್‌ ರವಿ ಅಶ್ವಿನ್‌ ಮೂರು ವಿಕೆಟ್‌ ಪಡೆದರು.

ಮೂರು ಬದಲಾವಣೆ

Advertisement

ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾರಣದಿಂದ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿತ್ತು. ಈ ಪಂದ್ಯಕ್ಕೆ ಭಾರತವು ಮೂರು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಆಡಿದ್ದ ಕೆಎಲ್‌ ರಾಹುಲ್‌, ಕುಲದೀಪ್‌ ಯಾದವ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಇಂದಿನ ಪಂದ್ಯಕ್ಕೆ ಶುಭಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಆಕಾಶ್‌ ದೀಪ್‌ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಮೊದಲ ಪಂದ್ಯದ ವೇಳೆ ಸ್ಕ್ವಾಡ್‌ ನಲ್ಲಿಯೂ ಇರದಿದ್ದ ವಾಷಿಂಗ್ಟನ್‌ ಅವರನ್ನು ಬಳಿಕ ಸೇರಿಸಲಾಗಿತ್ತು. ಅವರು ನೇರವಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next