Advertisement
ಎರಡನೇ ದಿನದಾಟದ ಅಂತ್ಯಕ್ಕೆ 198 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಇಂದು ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡಿತು. ಆದರೆ ಬಿರುಸಿನ ಬ್ಯಾಟಿಂಗ್ ನಡೆಸಿದ ಗ್ಲೆನ್ ಫಿಲಿಪ್ಸ್ ಸಿಕ್ಸರ್ ಬೌಂಡರಿ ಆಟವಾಡಿ 48 ರನ್ ಗಳಿಸಿ ಕಿವೀಸ್ ತಂಡದ ಮೊತ್ತವನ್ನು 255ಕ್ಕೆ ಏರಿಸಿದರು. ಟಾಮ್ ಬ್ಲಂಡೆಲ್ 41 ರನ್ ಗಳಿಸಿದರು. ಎರಡನೇ ದಿನದಾಟದಲ್ಲಿ ನಾಯಕ ಟಾಮ್ ಲ್ಯಾಥಂ 86 ರನ್ ಮಾಡಿದ್ದರು.
Related Articles
Advertisement
ನ್ಯೂಜಿಲೆಂಡ್ 1955-56ರಲ್ಲಿ ಭಾರತದಲ್ಲಿ ಆಡಲಾರಂಭಿಸಿದ ಬಳಿಕ ಟೆಸ್ಟ್ ಸರಣಿ ಜಯಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಸರಣಿ ಜಯಿಸುವ ಸನಿಹ ತಲುಪಿದೆ. ವಿಶೇಷವೆಂದರೆ ಇದುವರೆಗೆ ಕಿವೀಸ್ ಕೇವಲ 3 ಬಾರಿ ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ.
ಸತತ 18 ಸರಣಿ ಜಯದ ಓಟ ಅಂತ್ಯ?
ಭಾರತ ತವರಲ್ಲಿ ಕೊನೆಯ ಸಲ ಸರಣಿ ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್ ವಿರುದ್ಧ ಸೋತಿತ್ತು. ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡು ಬಂದಿದೆ. ಈಗ ಆ ಅಜೇಯ ಓಟ ಅಂತ್ಯವಾಗುವ ಸುಳಿವು ಸಿಕ್ಕಿದೆ