Advertisement

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

02:34 PM Oct 26, 2024 | Team Udayavani |

ಪುಣೆ: ಬ್ಯಾಟರ್‌ ಗಳ ನೀರಸ ಪ್ರದರ್ಶನದ ಕಾರಣದಿಂದ ಟೀಂ ಇಂಡಿಯಾ ಪುಣೆ ಟೆಸ್ಟ್‌ ಕಳೆದುಕೊಳ್ಳುವ ಹಂತದಲ್ಲಿದೆ. ಆದರೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದ ಆಟಗಾರರು ಬ್ಯಾಟಿಂಗ್‌ ನಡೆಸಲು ಪರದಾಡುತ್ತಿದ್ದರೆ ಯಶಸ್ವಿ ಜೈಸ್ವಾಲ್‌ ಮೂರು ಸಿಕ್ಸರ್‌ ನೆರವಿನಿಂದ 77 ರನ್‌ ಗಳಸಿದರು.

Advertisement

ಎರಡನೇ ಇನ್ನಿಂಗ್ಸ್‌ ನ ಮೂರು ಸಿಕ್ಸರ್‌ ನೆರವಿನೊಂದಿಗೆ ಯಶಸ್ವಿ ಜೈಸ್ವಾಲ್‌ ಅವರು ಈ ವರ್ಷ ಟೆಸ್ಟ್‌ ಕ್ರಿಕೆಟ್‌ ನಲ್ಲಿ 30ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದು ವರ್ಷದೊಳಗೆ 30+ ಸಿಕ್ಸರ್‌ ​ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಬರೆದಿದ್ದಾರೆ.

ಇದಕ್ಕೂ ಮುನ್ನ ಭಾರತದ ಪರ ಒಂದು ವರ್ಷದಲ್ಲಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್ ಹೆಸರಿನಲ್ಲಿತ್ತು. 2008 ರಲ್ಲಿ ವೀರೇಂದ್ರ ಸೆಹವಾಗ್ ಒಟ್ಟು 22 ಸಿಕ್ಸ್​ಗಳನ್ನು ಬಾರಿಸಿ ಒಂದೇ ವರ್ಷದೊಳಗೆ ಟೆಸ್ಟ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿರುವ ಜೈಸ್ವಾಲ್ 32 ಸಿಕ್ಸರ್ ​ಗಳನ್ನು ಬಾರಿಸಿದ್ದಾರೆ.

Advertisement

ಅಲ್ಲದೆ ಇದೇ ವೇಳೆ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಒಂದೇ ವರ್ಷ 30 ಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನ್ಯೂಝಿಲೆಂಡ್​ನ ಮಾಜಿ ನಾಯಕ ಬ್ರೆಂಡನ್ ಮೆಕಲಂ. 2014 ರಲ್ಲಿ 33 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಮೆಕಲಂ ಟೆಸ್ಟ್​ ನಲ್ಲಿ ಒಂದೇ ವರ್ಷ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ದ ಒಂದು ಪಂದ್ಯ ಬಾಕಿಯಿದ್ದು, ಬಳಿಕ ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಜೈಸ್ವಾಲ್‌ ಆಡಲಿದ್ದಾರೆ. ಹೀಗಾಗಿ ಜೈಸ್ವಾಲ್‌ ಅವರು ಮೆಕಲಂ ಅವರ 10 ವರ್ಷಗಳ ಹಳೆಯ ವಿಶ್ವ ದಾಖಲೆ ಮುರಿಯುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next