ಮುಂಬೈ: ಶುಭಮನ್ ಗಿಲ್, ರಿಷಭ್ ಪಂತ್ ಮತ್ತು ಅಂತ್ಯದಲ್ಲಿ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮುಂಬೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 263 ರನ್ ಗಳಿಸಿದ್ದು, 28 ರನ್ ಮುನ್ನಡೆಯಲ್ಲಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್ ತಂಡವು 235 ರನ್ ಗಳಿಸಿತ್ತು.
ನಾಲ್ಕು ವಿಕೆಟ್ ಗೆ 86 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಮೊದಲ ಸೆಶನ್ ನಲ್ಲಿ ರಿಷಭ್ ಪಂತ್ ಮತ್ತು ಶುಭಮನ್ ಗಿಲ್ಲ ಉತ್ತಮ ಜೊತೆಯಾಟದಿಂದ ಆಧರಿಸಿದರು. ಪಂತ್ 60 ರನ್ ಗಳಿಸಿ ಔಟಾದರು. ಉತ್ತಮ ಬ್ಯಾಟಿಂಗ್ ನಡೆಸಿದ ಗಿಲ್ 90 ರನ್ ಗಳಿಗೆ ಔಟಾಗಿ ಶತಕ ತಪ್ಪಿಸಿಕೊಂಡರು. 146 ಎಸೆತ ಎದುರಿಸಿದ ಗಿಲ್ 90 ರನ್ ಮಾಡಿದರು.
ಎರಡನೇ ಸೆಶನ್ ನಲ್ಲಿ ಸ್ಪಿನ್ನರ್ ಅಜಾಜ್ ಪಟೇಲ್ ದಾಳಿಗೆ ಸಿಲುಕಿದ ಭಾರತ ಸತತ ವಿಕೆಟ್ ಕಳೆದುಕೊಂಡಿತು. ಸರ್ಫರಾಜ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಜಡೇಜಾ 14 ರನ್ ಮಾಡಿದರು. ಅಶ್ವಿನ್ ಕೂಡಾ ಕೇವಲ ಆರು ರನ್ ಮಾಡಿದರು. ಆದರೆ ಕೊನೆಯಲ್ಲಿ ಬ್ಯಾಟ್ ಬೀಸಿದ ವಾಷಿಂಗ್ಟನ್ ಅಜೇಯ 38 ರನ್ ಮಾಡಿದರು.
ಕಿವೀಸ್ ಪರ ಅಜಾಜ್ ಪಟೇಲ್ ಐದು ವಿಕೆಟ್ ಕಿತ್ತರೆ, ಹೆನ್ರಿ, ಸೋಧಿ, ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.