ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 307 ರನ್ ಗಳಿಗೆ ಆಲೌಟಾಗಿದೆ. ಇದರೊಂದಿಗೆ ಭಾರತವು ರಾಂಚಿ ಟೆಸ್ಟ್ ನಲ್ಲಿ 46 ರನ್ ಗಳ ಹಿನ್ನಡೆಯಲ್ಲಿದೆ.
7 ವಿಕೆಟ್ ಗೆ 219 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ನೆರವಾದರು. ಎಂಟನೇ ವಿಕೆಟ್ ಗೆ ಕುಲದೀಪ್ ಯಾದವ್ ಜತೆಗೆ 76 ರನ್ ಜತೆಯಾಟವಾಡಿದರು. 131 ಎಸೆತ ಎದುರಿಸಿದ ಕುಲದೀಪ್ ಯಾದವ್ 28 ರನ್ ಗಳಿಸಿದರು.
ಕುಲದೀಪ್ ಔಟಾದ ಬಳಿಕ ವೇಗವಾಗಿ ಬ್ಯಾಟ್ ಬೀಸಿದ ಜುರೆಲ್ 90 ರನ್ ಗಳಿಸಿದರು. ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಬಾರಿಸಿದ ಜುರೆಲ್ ಚೊಚ್ಚಲ ಶತಕವನ್ನು ತಪ್ಪಿಸಿಕೊಂಡರು.
ಇಂಗ್ಲೆಂಡ್ ಪರ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಐದು ವಿಕೆಟ್ ಪಡೆದರು. ಟಾಮ್ ಹಾರ್ಟ್ಲಿ ಮೂರು ವಿಕೆಟ್ ಕಿತ್ತರೆ, ಎರಡು ವಿಕೆಟ್ ಜೇಮ್ಸ್ ಆ್ಯಂಡರ್ಸನ್ ಪಾಲಾಯಿತು.
ಈ ಇನ್ನಿಂಗ್ಸ್‌ನಲ್ಲಿ ಭಾರತದ ನಾಲ್ಕು ಬ್ಯಾಟಿಂಗ್ ರಿವೀವ್ ಗಳು ಅಂಪೈರ್ ಕಾಲ್ ಪರವಾಗಿ ಬಂದವು. (ಗಿಲ್, ಪಾಟಿದಾರ್, ಅಶ್ವಿನ್ ಮತ್ತು ಆಕಾಶ್ ದೀಪ್). ಟೆಸ್ಟ್ ನಲ್ಲಿ ಯಾವುದೇ ಇನ್ನಿಂಗ್ಸ್‌ನಲ್ಲಿ ಇದು ಅತಿ ಹೆಚ್ಚು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 353 ರನ್ ಗಳಿಸಿತ್ತು. ಭಾರತ ಸದ್ಯ 46 ರನ್ ಹಿನ್ನಡೆಯಲ್ಲಿದೆ.