Advertisement
ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಸ್ಯೂಟಿಕ್ ಲ್ಯಾಬ್ ಕಾರ್ಖಾನೆಯಲ್ಲಿ ಕೆಮಿಕಲ್ ಮಿಶ್ರಣ ಸಂದರ್ಭದಲ್ಲಿ ಅವಘಡ ಸಂಭವಿಸಿದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಪಟ್ಟಣಪೊಡಿ ಗ್ರಾಮದ ನಿವಾಸಿ ಗುರುಪ್ರಸಾದ ಮೃತಪಟ್ಟಿದ್ದಾನೆ.
Related Articles
Advertisement
ಇದನ್ನೂ ಓದಿ: ಪ್ರಾಣಿಗಳಿಗೂ ಬರಲಿಗೆ ಸ್ಮಾರ್ಟ್ ವಾಚ್
ಜೀವಕ್ಕೆ ಇಲ್ಲ ಬೆಲೆ; ಇಲ್ಲಿನ ಕಾರ್ಖಾನೆಗಳು ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ಹಾಗೆ ಕೆಲಸ ನಿರ್ವಹಿಸುತ್ತಿವೆ ಎಂಬ ಆರೋಪಗಳು ಇವೆ. ಕಾರ್ಖಾನೆಗಳ ಒಳಗೆ ಕೆಲಸ ಮಾಡುವವರಿಗೂ ಸುರಕ್ಷತೆ ಇಲ್ಲ. ಕಾರ್ಖಾನೆಗಳಿಂದ ಹೊರ ಬರುವ ತ್ಯಾಜ್ಯದಿಂದ ಸುತ್ತಲ್ಲಿನ ಲಕ್ಷಾತಂರ ಜನರಿಗೂ ನೆಮ್ಮದಿ ಇಲ್ಲದಂತಾಗಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಜನ-ಜಾನುವಾರುಗಳು ಸಂಕಷ್ಟ ಎದುರಿಸುತ್ತಿದ್ದರು ಕೂಡ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಕಾನೂನು ಮೀರುವ ಕಾರ್ಖಾನೆಗಳ ವಿರುದ್ದ ದಿಟ್ಟ ಕ್ರಮ ತೆಗೆದುಕೊಂಡ ಉದಾಹರಣೆಗಳು ಇಲ್ಲ. ಒಟ್ಟಾರೆ ಹಣ ಗಳಿಸುವ ಏಕಮಾತ್ರ ಉದ್ದೇಶದಿಂದ ಮನುಷ್ಯ ಜೀವಗಳಿಗೆ ಉಳ್ಳುವರು ಬೆಲೆ ನೀಡುತ್ತಿಲ್ಲ ಎಂದು ಮಾಜಿ ತಾಪಂ ಸದಸ್ಯ ಗಜೇಂದ್ರ ಕನಕಟ್ಟಕರ್ ಆರೋಪಿಸುತ್ತಿದ್ದಾರೆ.
ಜಿಲ್ಲಾಧಿಕಾರಿ-ಎಸ್ಪಿ ಭೇಟಿ
ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಬೀದರ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಬುಧವಾರ ರಾತ್ರಿ ಔಷಧಿ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೆಮಿಕಲ್ ಮಿಕ್ಸ್ ಪ್ರೋಸೆಸ್ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಇದರಿಂದ ಸುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ಆತಂಕ ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆ ಸಂಭವಿಸಿದ್ದು ಹೇಗೆ ?
ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಕಲಬುರಗಿ ಅವರ ಪ್ರಾಥಮಿಕ ವರದಿ ಪ್ರಕಾರ ಸ್ಪೂಟಿಕ್ ಲ್ಯಾಬ್ ಉತ್ಪಾದಕ ಘಟಕ 1ರಲ್ಲಿ ರಿಯಾಕ್ಟ್ರ್ ನಲ್ಲಿ ಗ್ಯಾಸ್ ಲೀಕ್ ಆಗಿ ಅವಘಡ ಸಂಭವಿಸಿದೆ. ನಿಗದಿತ ಪ್ರಮಾಣದ ಕೆಮಿಕಲ್ ನಿಗದಿತ ಅವಧಿಯಲ್ಲಿ ಬಳಸುವ ಬದಲಿಗೆ ಕಡಿಮೆ ಅವಧಿಯಲ್ಲಿ ಬಳಸಿದ ಕಾರಣಕ್ಕೆ ರಿಯಾಕ್ಟರ್ ನಲ್ಲಿ ಒತ್ತಡ ಹೆಚ್ಚಾಗಿದ ಕಾರಣಕ್ಕೆ ನಾಲ್ಕು ಜನರು ಅಸ್ವಸ್ತಗೊಂಡಿದ್ದಾರೆ ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ ಎಂದು -ಜಿಲ್ಲಾಧಿಕಾರಿಗಳಿಗರ ವರದಿ ಸಲ್ಲಿಸಿದ್ದಾರೆ.
-ದುರ್ಯೋಧನ ಹೂಗಾರ