Advertisement
ಸ್ವದೇಶಿ ನಿರ್ಮಿತ ಈ ಯುದ್ಧ ವಿಮಾನವು ಕ್ಷಿಪಣಿಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಡಾಯಿಸುವ ಸಾಮರ್ಥಯವನ್ನು ಹೊಂದಿದೆ.2021ರ ಫೆಬ್ರವರಿಯಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್(ಎಚ್‌ಎಎಲ್) ಮತ್ತು ರಕ್ಷಣಾ ಸಚಿವಾಲಯದ ನಡುವೆ 48,000 ಕೋಟಿ ರೂ. ಮೊತ್ತದಲ್ಲಿ 83 ತೇಜಸ್ ಎಂಕೆ-1ಎ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಏರ್ಪಟ್ಟಿತ್ತು.
2,725 ಕೋಟಿ ರೂ. ವೆಚ್ಚದಲ್ಲಿ ಜಲಾಂತರ್ಗಾಮಿ ಐಎನ್‌ಎಸ್ ಶಂಕುಶ್ ಮರುಜೋಡಣೆಗಾಗಿ ರಕ್ಷಣಾ ಸಚಿವಾಲಯ ಮತ್ತು ಮಜಗಾನ್ ಡಾಕ್ ಶಿಪ್‌ಬಿಲ್ಡರ್ ಲಿ.(ಎಂಡಿಎಲ್) ನಡುವೆ ಶುಕ್ರವಾರ ಒಪ್ಪಂದ ಏರ್ಪಟ್ಟಿತು.