Advertisement

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

08:52 PM Sep 28, 2022 | Team Udayavani |

ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169ಎ) ಕಾಮಗಾರಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅ.1ರಿಂದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ತಯಾರಿಗೆ ತಯಾರಿ ನಡೆಸಲಾಗಿದ್ದು, ಈ ಮಾರ್ಗದಲ್ಲಿ ಘನ ವಾಹನ ಸಂಚಾರಕ್ಕೆ ನಿಷೇಧ ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Advertisement

ಅ.1ರಿಂದ 45 ದಿನಗಳವರೆಗೆ ಕಾರು, ದ್ವೀಚಕ್ರ ವಾಹನ, ಬಸ್ಸು ಹೊರತುಪಡಿಸಿ ಇತರೆ ಘನ ವಾಹನಗಳಿಗೆ (ಮಲ್ಟಿ ಎಕ್ಸೆಲ್‌ ಮಾದರಿಯ ವಾಹನಗಳು) ಪ್ರವೇಶವಿಲ್ಲ .

ಘನ ವಾಹನಗಳ ಬದಲಿ ಮಾರ್ಗ ಇಂತಿದೆ:
ಕುಂದಾಪುರ ಕಡೆಯಿಂದ- ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ ರಸ್ತೆ. ಉಡುಪಿಯಿಂದ ಕಲ್ಸಂಕ-ಗುಂಡಿಬೈಲು, ಎ. ವಿ. ಬಾಳಿಗ ಆಸ್ಪತ್ರೆ ಮೂಲಕ ಮಣಿಪಾಲಕ್ಕೆ, ಕಾರ್ಕಳ, ಹಿರಿಯಡ್ಕದಿಂದ ಮಣಿಪಾಲ, ಪೆರಂಪಳ್ಳಿ, ಅಂಬಾಗಿಲು ಮೂಲಕ ಚಲಿಸಬೇಕು.

ಉಡುಪಿ-ಮಣಿಪಾಲ ಸಂಚರಿಸುವ ದ್ವಿಚಕ್ರ ವಾಹನ, ಕಾರು, ಬಸ್ಸು ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಎಚ್ಚರಿಕೆಯಿಂದ ಚಲಿಸುವಂತೆ ಡಿಸಿ ಪ್ರಕಟನೆ ತಿಳಿಸಿದೆ.

ಉದಯವಾಣಿ ನಿರಂತರ ವರದಿ
ಇಂದ್ರಾಳಿ ರೈಲ್ವೆ ಸೇತುವೆ ರಸ್ತೆ ಅವ್ಯವಸ್ಥೆ ಬಗ್ಗೆ “ಉದಯವಾಣಿ ಸುದಿನ’ ನಿರಂತರ ವರದಿಗಳನ್ನು ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆ ಮಳೆಗಾಲದಲ್ಲಿ ಕೆಸರಿನ ಸಮಸ್ಯೆ, ಬೇಸಗೆಯಲ್ಲಿ ಧೂಳಿನಿಂದ ತತ್ತರಿಸಿದ್ದ ಸವಾರರ ಬವಣೆಗಳನ್ನು ವಿಸ್ತೃತ ವರದಿ ಮೂಲಕ ಪ್ರಕಟಿಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next