Advertisement

ಸ್ವಚ್ಛ ನಗರ: 5ನೇ ಸ್ಥಾನಕ್ಕೆ ಕುಸಿದ ಮೈಸೂರು

02:36 AM May 05, 2017 | Team Udayavani |

ಮಂಗಳೂರು-63, ಉಡುಪಿ-143

Advertisement

ಹೊಸದಿಲ್ಲಿ:
ಪ್ರಸಕ್ತ ವರ್ಷದ ‘ಸ್ವಚ್ಛ ನಗರ’ಗಳ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಸತತ 2 ವರ್ಷ ದೇಶದ ಅತೀ ‘ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ಈ ಬಾರಿ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿದೆ. ಈ ಮೂಲಕ ಹ್ಯಾಟ್ರಿಕ್‌ ಗರಿಮೆಯ ಅವಕಾಶವನ್ನು ಮೈಸೂರು ಕಳೆದುಕೊಂಡಿದೆ. ಮೈಸೂರಿನ ಜಾಗವನ್ನು ಆಕ್ರಮಿಸಿಕೊಂಡಿರುವ ಮಧ್ಯ ಪ್ರದೇಶದ ಇಂದೋರ್‌, ದೇಶದ ಅತೀ ಸ್ವಚ್ಛ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಎರಡನೇ ಸ್ಥಾನವನ್ನು ಭೋಪಾಲ್‌ ಪಡೆದಿದೆ. ಅರಮನೆ ನಗರವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಗುರುವಾರ ‘ಸ್ವಚ್ಛ ಸರ್ವೇಕ್ಷಣ್‌-2017’ರ ಪಟ್ಟಿಯನ್ನು ಹೊಸದಿಲ್ಲಿಯಲ್ಲಿ ಘೋಷಿಸಿದರು. ಈ ಬಾರಿ ಒಟ್ಟು 434 ನಗರಗಳಲ್ಲಿ ಸರ್ವೇ ನಡೆಸಲಾಗಿದ್ದು, ಟಾಪ್‌ 50 ನಗರಗಳಲ್ಲಿ ಕರ್ನಾಟಕದ ಮೈಸೂರು ಮಾತ್ರವೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅದನ್ನು ಹೊರತು ಪಡಿಸಿದರೆ, ಮಂಗಳೂರು 63, ಉಡುಪಿ 143, ಶಿವಮೊಗ್ಗ 147, ಮಂಡ್ಯ 148ನೇ ರ್‍ಯಾಂಕ್‌ ಪಡೆದಿವೆ. ರಾಜಧಾನಿ ಬೆಂಗಳೂರು 210ನೇ ಸ್ಥಾನದಲ್ಲಿದೆ. ಕರ್ನಾಟಕದ ಒಟ್ಟು 25 ನಗರಗಳಲ್ಲಿ ಸ್ವಚ್ಛತಾ ಸರ್ವೇ ನಡೆಸಲಾಗಿತ್ತು.

ದೇಶದ ಅತಿ ಮಲಿನ ನಗರ ಎಂಬ ಕುಖ್ಯಾತಿಯನ್ನು ಉತ್ತರಪ್ರದೇಶದ ಗೊಂಡಾ ನಗರ ಪಡೆದಿದೆ. ಮಲಿನ ನಗರಗಳಲ್ಲಿ ಟಾಪ್‌ 50 ನಗರಗಳೂ ಉತ್ತರಪ್ರದೇಶದ್ದು ಎಂಬುದು ಮತ್ತೂಂದು ಅಚ್ಚರಿ. ಬಿಹಾರ ಕೂಡ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ. ಆದರೆ, ಪ್ರಧಾನಿ ಮೋದಿ ಅವರ ಕ್ಷೇತ್ರವಾದ ಉ. ಪ್ರದೇಶದ ವಾರಾಣಸಿ 32ನೇ ರ್‍ಯಾಂಕ್‌ ಗಳಿಸಿದೆ. ಗುಜರಾತ್‌ನ 12 ನಗರಗಳು ಟಾಪ್‌ 50 ಸ್ವಚ್ಛ ನಗರಗಳ ಪೈಕಿ ಸ್ಥಾನ ಪಡೆದುಕೊಂಡಿವೆ. ಇನ್ನು ಮಧ್ಯಪ್ರದೇಶದ 11, ಆಂಧ್ರದ 8  ನಗರಗಳು ಟಾಪ್‌ 50ರಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next